ಐಸಿಸಿ ನೂತನ ಟಿ20 Rankings: ಬೌಲಿಂಗ್ ನಲ್ಲಿ ರಶೀದ್​ ಖಾನ್, ಬ್ಯಾಟಿಂಗ್ ನಲ್ಲಿ ಸೂರ್ಯಕುಮಾರ್ ಟಾಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ನೂತನ ಟಿ20 ಬೌಲರ್​ಗಳ ಶ್ರೇಯಾಂಕ(ICC Rankings) ಪಟ್ಟಿ ಬಿಡುಗಡೆಗೊಳಿಸಿದ್ದು, ಅಫಘಾನಿಸ್ತಾನ ಸ್ಪಿನ್ನರ್​ ರಶೀದ್​ ಖಾನ್(Rashid Khan)​ ನಂ.1 ಸ್ಥಾನ ಪಡೆದಿದ್ದಾರೆ.

ಶ್ರೀಲಂಕಾ ತಂಡದ ವನಿಂದು ಹಸರಂಗ(Wanindu Hasaranga) ಒಂದು ಸ್ಥಾನಗಳ ಕುಸಿತ ಕಂಡು ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ.

ಸದ್ಯ ಅವರು 710 ರೇಟಿಂಗ್​ ಅಂಕ ಹೊಂದಿದ್ದಾರೆ. ಹಸರಂಗ (695), ಫಝಲ್​ಹಕ್ ಫಾರೂಕಿ ಮೂರನೇ ಮತ್ತು ಜೋಶ್​ ಹ್ಯಾಝಲ್​ವುಡ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಆದರೆ ಭಾರತದ ಯಾವುದೇ ಬೌಲರ್​ ಕೂಡ ಅಗ್ರ 10ರಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. 635 ಅಂಕ ಹೊಂದಿರುವ ಅರ್ಶ್​ದೀಪ್​ ಸಿಂಗ್​ 14ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಬ್ಯಾಟಿಂಗ್​ ವಿಭಾಗದಲ್ಲಿ ಟೀಮ್​ ಇಂಡಿಯಾ ​ ಸೂರ್ಯಕುಮಾರ್​ ಯಾದವ್(suryakumar yadav)​ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಟಾಪ್-10 ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹೊರತುಪಡಿಸಿ ಉಳಿದ ಯಾವುದೇ ಟೀಮ್ ಇಂಡಿಯಾದ ಆಟಗಾರರು ಸ್ಥಾನ ಪಡೆದಿಲ್ಲ. ವಿರಾಟ್ ಕೊಹ್ಲಿ(Virat Kohli) 2 ಸ್ಥಾನ ಕುಸಿತ ಕಂಡು 16ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಕೆ ಎಲ್ ರಾಹುಲ್(KL Rahul) ಮೂರು ಸ್ಥಾನ ಕುಸಿತದೊಂದಿಗೆ 28ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ನಾಯಕ ರೋಹಿತ್ ಶರ್ಮಾ(Rohit Sharma) 31ನೇ ಸ್ಥಾನಕ್ಕೆ ಕುಸಿದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!