ಐಸಿಸಿ ರ‍್ಯಾಂಕಿಂಗ್‌: ಜಿಗಿತ ಕಂಡ ಬುಮ್ರಾ, ಉತ್ತಮ ಸ್ಥಾನದಲ್ಲಿ ರೋಹಿತ್-​ ಕೊಹ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಐಸಿಸಿಯು ಏಕದಿನ, ಟೆಸ್ಟ್​ ಮತ್ತು ಟಿ20 ಶ್ರೇಯಾಂಕ ಪ್ರಕಟಿಸಿದ್ದು, ಟೆಸ್ಟ್ ಬೌಲಿಂಗ್​ ಶ್ರೇಯಾಂಕದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಏರಿಕೆ ಕಂಡಿದ್ದಾರೆ. ಸ್ಪಿನ್ನರ್ ಅಶ್ವಿನ್​ 2ನೇ ಶ್ರೇಯಾಂಕದಲ್ಲಿ ಮುಂದುವರಿದ್ದಾರೆ.

ಟೆಸ್ಟ್​ ಬ್ಯಾಟಿಂಗ್ ರ‍್ಯಾಂಕಿಂಗ್​ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ (8) ಮತ್ತು ವಿರಾಟ್​ ಕೊಹ್ಲಿ(10) 10 ರ ಒಳಗೆ ಇದ್ದು, ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್​(892), ಸ್ಟೀವ್​ ಸ್ಮಿತ್​(845), ಕೇನ್ ವಿಲಿಯಮ್ಸನ್​(844), ಜೋ ರೂಟ್​(843) ಮತ್ತು ಬಾಬರ್ ಅಜಮ್(815) ಟಾಪ್​ 5ರಲ್ಲಿದ್ದಾರೆ.

ಬೌಲಿಂಗ್ ನಲ್ಲಿ ಆಸೀಸ್​ ನಾಯಕ ಪ್ಯಾಟ್​ ಕಮಿನ್ಸ್​(901), ಅಶ್ವಿನ್(850), ಜಸ್ಪ್ರೀತ್ ಬಮ್ರಾ(830), ಶಾಹೀನ್ ಅಫ್ರಿದಿ(827), ಕಗಿಸೊ ರಬಾಡ(827) ಅಗ್ರ 5ರಲ್ಲಿದ್ದಾರೆ.

ಅದೇ ರೀತಿ ಆಲ್​ರೌಂಡರ್​ ಶ್ರೇಯಾಂಕದಲ್ಲಿ ರವೀಂದ್ರ ಜಡೇಜಾ (385) ಅಗ್ರಸ್ಥಾನದಲ್ಲಿದ್ದರೆ, ರವಿಚಂದ್ರನ್ ಅಶ್ವಿನ್​(341) 2ನೇ ಸ್ಥಾನದಲ್ಲಿ ಇದ್ದಾರೆ.

ಏಕದಿನ ಶ್ರೇಯಾಂಕದಲ್ಲಿ ಪಾಕಿಸ್ತಾನದ ನಾಯಕ ಬಾಬರ್​ ಅಜಮ್​(891), ವಿರಾಟ್​ ಕೊಹ್ಲಿ(811) ಮೊದಲೆರಡು ಸ್ಥಾನದಲ್ಲಿದ್ದರೆ, ಇಮಾಮ್​ ಉಲ್ ಹಕ್​ 3ನೇ ರ‍್ಯಾಂಕ್​ಗೆ ಬಡ್ತಿ ಪಡೆದುಕೊಂಡಿದ್ದಾರೆ. ರೋಹಿತ್ ಶರ್ಮಾ 4 ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟನ್​ ಡಿ ಕಾಕ್​ 5ನೇ ಸ್ಥಾನದಲ್ಲಿ ತಟಸ್ಥರಾಗಿದ್ದಾರೆ.

ಏಕದಿನ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಟ್ರೆಂಟ್​ ಬೌಲ್ಟ್​(726), ಕ್ರಿಸ್ ವೋಕ್ಸ್​(700), ಜೋಶ್​ ಹೇಜಲ್​ವುಡ್​(698) ಅಗ್ರ 3 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!