ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಪುರುಷರ ಏಕದಿನ ವಿಶ್ವಕಪ್ 13ನೇ ಪಂದ್ಯದಲ್ಲಿ ಇಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಹಣಾಹಣಿ ನಡೆಸಲಿವೆ.
ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ಆಫ್ಘಾನಿಸ್ತಾನ ತಂಡ ಮುಖಾಮುಖಿಯಾಗುತ್ತಿವೆ.
ಅಫ್ಘಾನ್ ತಂಡ ಈ ಮಹಾ ಟೂರ್ನಿಯಲ್ಲಿ ಈಗಾಗಲೇ ಎರಡು ಸೋಲುಗಳನ್ನು ಕಂಡಿದ್ದು, ಒಟ್ಟಾರೆಯಾಗಿ ವಿಶ್ವಕಪ್‌ನಲ್ಲಿ ಸತತ 14 ಸೋಲುಗಳನ್ನು ಅನುಭವಿಸಿದೆ.
ಇಂದಾದರೂ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ವಿಶ್ವಕಪ್ ಸೋಲಿನ ಸರಪಳಿಯನ್ನು ಅಫ್ಘಾನ್ ಕಳಚುತ್ತಾ ಎಂದು ಕಾದು ನೋಡಬೇಕಿದೆ.