ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಸಿಗೆಯಲ್ಲಿ ನಾವೆಲ್ಲರೂ ಸಾಮಾನ್ಯವಾಗಿ ಐಸ್ ಕ್ರೀಮ್ ತಿನ್ನಲು ಇಷ್ಟಪಡುತ್ತೇನೆ. ಆದರೆ ಇಲ್ಲೊಂದು ವೈರಲ್ ವೀಡಿಯೊ ನೀವೇನಾದ್ರು ನೋಡಿದ್ರೆ ಮತ್ತೊಮ್ಮೆ ನೀವು ಐಸ್ ಕ್ರೀಮ್ ತಿನ್ನೋಕ್ಕೆ ಇಷ್ಟಪಡುತ್ತಿರೋ ಇಲ್ವೋ ನಿಮಗೆ ಬಿಟ್ಟಿದ್ದು. ಉತ್ತರ ಪ್ರದೇಶದ ಲಕ್ನೋದ ಲುಲು ಮಾಲ್‌ನಲ್ಲಿರುವ ನೇಷನ್ ಸ್ಟೋರ್‌ನ ಫಲೂದದಲ್ಲಿ ಹುಳ ಪತ್ತೆಯಾಗಿದ್ದು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಲುಲು ಮಾಲ್ ಗೆ ಪ್ರತಿದಿನ ಸಾವಿರಾರು ಜನರು ಶಾಪಿಂಗ್ ಮಾಡಲು ಮತ್ತು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಭೇಟಿ ನೀಡುತ್ತಾರೆ. ಈ ಮಾಲ್‌ನ ಬೇಜವಾಬ್ದಾರಿಯ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೋಗೆ ಹಲವು ಜನರು ಕಾಮೆಂಟ್‌ಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಇದು ಸಣ್ಣ ಸಮಸ್ಯೆಯಲ್ಲ, ಅಧಿಕಾರಿಗಳು ಇದಕ್ಕೆ ಸ್ಪಂದಿಸಬೇಕು ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
#लखनऊ#लुलुमॉल के फालूदा नेशन में निकला #कुल्फी में कीड़ा !
लोगो की सेहत से #खिलवाड़ !#फूड_विभाग भी नामी कंपनी के प्रोडक्ट पर जांच के नाम पर कर रहा खानापूर्ति !लुलु मॉल के अंदर फूड प्रोडक्ट पर कई बार घटिया सामग्री की शिकायत के हो चुके है #विडियो_वायरल !#फूड_विभाग द्वारा… pic.twitter.com/rdT3E1LoSe
— Anand Mishra (@AnandMi38424236) March 28, 2024