ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲ ಟೂರಿಸ್ಟ್‌ಗಳು ಕುದುರೆ ಮೇಲೆ ಪಹಲ್ಗಾಮ್ ಕಡೆ ಹೊರಟಿದ್ರು. ನಾವು ದಣಿವಾಯ್ತು ಎಂದು ಮಧ್ಯದಲ್ಲೇ ಐಸ್‌ಕ್ರೀಂ ತಿನ್ನೋಕೆ ಇಳಿದುಕೊಂಡೆವು. ಉಳಿದ ಪ್ರವಾಸಿಗರು ಮುಂದೆ ಹೋದರು. ನಾವು ಸ್ವಲ್ಪ ತಡ ಮಾಡಿದ್ದಕ್ಕೆ ನಮ್ಮ ಜೀವ ಉಳಿದಿದೆ ಎಂದು ಪಹಲ್ಗಾಮ್ ಟೆರರಿಸ್ಟ್ ಅಟ್ಯಾಕ್‌ನ ಸರ್ವೈವರ್ ಹೇಳಿದ್ದಾರೆ.
ಬೆಂಗಳೂರಿನ ಸುಮನಾ ಭಟ್ ಈ ಬಗ್ಗೆ ಮಾಹಿತಿ ನೀಡಿದ್ದು, ಒಂದು ಐಸ್‌ಕ್ರೀಂ ನಮ್ಮ ಜೀವ ಉಳಿಸಿದೆ. ಟೂರ್ ಗೈಡ್ ಪಹಲ್ಗಾಮ್ ಬಗ್ಗೆ ತುಂಬಾ ಮಾಹಿತಿ ನೀಡಿದ್ರು. ಅದರ ಬಗ್ಗೆ ನಾವು ತುಂಬಾ ಉತ್ಸುಕರಾಗಿದ್ದೆವು. ತಿನ್ನೋದಕ್ಕೆ ಸ್ವಲ್ಪ ಹಿಂದೆ ಉಳಿದುಕೊಂಡೆವು. ಕೆಲ ಸಮಯದ ನಂತರ ಅಲ್ಲಿಂದ ಜನರು ಓಡಿ ಬರುತ್ತಿದ್ದರು.
ಜೀವ ಉಳಿಸಿಕೊಳ್ಳಬೇಕಾದ್ರೆ ಈಗಲೇ ಹೊರಡಿ ಎಂದು ಕೂಗಿದರು. ನಾವು ಬಿಟ್ಟೂ ಬಿಡದಂತೆ ಎರಡು ಮೂರು ಕಿಲೋಮೀಟರ್ ಓಡಿ ಹೋಗಿ ಪ್ರಾಣ ಉಳಿಸಿಕೊಂಡೆವು. ಹೊಟೇಲ್‌ಗೆ ಹೋಗಿ ಅಲ್ಲಿ ಲಗೇಜ್ ತೆಗೆದುಕೊಂಡು ಭಾರತೀಯ ಸೇನೆಯ ವಾಹನಗಳಲ್ಲಿ ಜಮ್ಮುವಿಗೆ ಮರಳಿದೆವು ಎಂದು ಸುಮನಾ ಭಟ್ ಮಾಹಿತಿ ನೀಡಿದ್ದಾರೆ.