ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸ್‌ಲ್ಯಾಂಡ್ ನಲ್ಲಿ ಕಳೆದ 14 ಗಂಟೆಗಳಲ್ಲಿ 800 ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿ ಘೋಷಿಸಿದೆ.
‘ದೇಶದ ನೈರುತ್ಯ ಭಾಗದ ರೆಕ್ಯಾಜೇನ್ಸ್ ಭಾಗದಲ್ಲಿ ಗ್ರಿಂಡ್‌ವಿಕ್‌ನಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ. ಈ ಸರಣಿ ಭೂಕಂಪದಿಂದ ಜ್ವಾಲಾಮುಖಿ ಸ್ಪೋಟಿಸುವ ಸಾಧ್ಯತೆ ಇದೆ’ ಎಂದು ನಾಗರಿಕ ರಕ್ಷಣೆ ಹಾಗೂ ತುರ್ತು ನಿರ್ವಹಣಾ ಇಲಾಖೆ ತಿಳಿಸಿದೆ.
ಶುಕ್ರವಾರ ಸಂಜೆ 5.30ರಿಂದ ಭೂಮಿ ಕಂಪಿಸಲು ಪ್ರಾರಂಭಿಸಿದೆ. ಕಳೆದ ಅಕ್ಟೋಬರ್‌ನಿಂದ ಇಲ್ಲಿಯವರೆಗೆ ಸುಮಾರು 24 ಸಾವಿರ ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಕಳೆದ 14 ಗಂಟೆಗಳಲ್ಲಿ 800 ಬಾರಿ ಭೂಮಿ ಕಂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.