ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಅವರ ನಿವಾಸಕ್ಕೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಭೇಟಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬ್ರಹ್ಮಾನಂದಂ ಅವರ ಎರಡನೇ ಮಗ ಸಿದ್ಧಾರ್ಥ್ ಮದುವೆ ಆಗಸ್ಟ್ 19ರಂದು ಹೈದರಾಬಾದ್ ನಲ್ಲಿ ನಡೆದಿದ್ದು ಗೊತ್ತೇ ಇದೆ. ಈ ಮದುವೆಯಲ್ಲಿ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಭಾಗವಹಿಸಿದ್ದರು.
ಆದರೆ, ವೈಯಕ್ತಿಕ ಕಾರಣಗಳಿಂದ ಅಲ್ಲು ಅರ್ಜುನ್ ಈ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಹೈದರಾಬಾದ್‌ನಲ್ಲಿರುವ ಬ್ರಹ್ಮಾನಂದಂ ನಿವಾಸಕ್ಕೆ ಐಕಾನ್ ಸ್ಟಾರ್ ತೆರಳಿ, ಸಿದ್ಧಾರ್ಥ್ ಮತ್ತು ಐಶ್ವರ್ಯ ದಂಪತಿಗೆ ಶುಭ ಹಾರೈಸಿದರು.
ಇದೇ ವೇಳೆ ಅಲ್ಲು ಅರ್ಜುನ್‌ಗೆ ರಾಷ್ಟ್ರೀಯ ಶ್ರೇಷ್ಠ ನಟ ಪ್ರಶಸ್ತಿ ಲಭಿಸಿರುವುದಕ್ಕೆ ಬ್ರಹ್ಮಾನಂದಂ ಸಂತಸ ವ್ಯಕ್ತಪಡಿಸಿದ್ದಾರೆ. ಬನ್ನಿಗೆ ಹೂಗುಚ್ಛ ನೀಡಿ ವಿಶೇಷವಾಗಿ ಸ್ವಾಗತಿಸಲಾಯಿತು.