ಹೊಸದಿಗಂತ ವರದಿ ಹುಬ್ಬಳ್ಳಿ:
ನಗರದ ಅಂಜುಮನ್ ಸಂಸ್ಥೆ ರಾಣಿ ಚನ್ನಮ್ಮ ಮೈದಾನ (ಈದ್ಗಾ)ದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡಬಾರದು ಎಂದು ಧಾರವಾಡ ಹೈಕೋರ್ಟ್ ನಲ್ಲಿ ಸಲ್ಲಿಸಿದ ಅರ್ಜಿ ತಿರಸ್ಕೃತವಾಗಿದ್ದು, ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಶಾಸಕರು ಪಾಲಿಕೆ ಆವರಣದಲ್ಲಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ನ್ಯಾಯಾಲಯವು ಇದು ಪಾಲಿಕೆಯ ಆಸ್ತಿ ಎಂದು ಘೋಷಿಸಿದೆ. ಪಾಲಿಕೆಗೆ ಸಂಪೂರ್ಣ ಅಧಿಕಾರವಿದ್ದು, ಆಯುಕ್ತರು ಕೂಡಲೇ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಅರ್ಜಿ ತಿರಸ್ಕಾರಗೊಂಡ ವಿಷಯ ಬೆಲ್ಲದ್ ಅವರು ಹೇಳುತ್ತಿದ್ದಂತೆ, ಬಿಜೆಪಿ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿತ್ತು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗಣೇಶಮೂರ್ತಿ ಹೊತ್ತು ಘೋಷಣೆ ಕೂಗಿದರು.
ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಮಾತನಾಡಿ, ಕೋರ್ಟ್ನಲ್ಲಿ ಅರ್ಜಿ ತಿರಸ್ಕೃತಗೊಂಡಿದ್ದು ಹಿಂದೂ ಸಂಸ್ಕೃತಿಗೆ ದೊರೆತ ಜಯ. ಮುಂದಿನ ವರ್ಷಗಳಲ್ಲೂ ನಾವು ರಾಣಿಚನ್ನಮ್ಮ ಮೈದಾನದಲ್ಲಿ ಮೂರ್ತಿ ಪ್ರತಿಷ್ಠಾಪಿಸುತ್ತೇವೆ. ಅದನ್ನು ನಿಲ್ಲಿಸುವ ತಾಕತ್ತು ಯಾರಿಗೆ ಇದೆ ನೋಡೋಣ ಎಂದರು.