ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಮಾರುಕಟ್ಟೆಯಲ್ಲಿ ಐಇಡಿ ಸ್ಫೋಟ ಸಂಭವಿಸದ ಪರಿಣಾಮ ಐದು ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ.
ಬಜಾರ್‌ನಲ್ಲಿ ನಿಲ್ಲಿಸಿದ್ದ ಮೋಟಾರ್‌ಬೈಕ್‌ನಲ್ಲಿ ಸ್ಫೋಟಕ ಸಾಧನ ಪತ್ತೆಯಾಗಿದ್ದು. ಸ್ಫೋಟದಲ್ಲಿ ಹಲವಾರು ವಾಹನಗಳು ನಾಶವಾಗಿವೆ. ನಾಲ್ವರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.