ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತಿನ ಗಾಂಧಿನಗರದಲ್ಲಿ ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್’ನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ನಾನು ಗುಜರಾತ್‍ನ ಎಲ್ಲಾ ಜನರು, ಎಲ್ಲಾ ಶಿಕ್ಷಕರು ಮತ್ತು ಎಲ್ಲಾ ಯುವ ಸ್ನೇಹಿತರನ್ನ ಅಭಿನಂದಿಸುತ್ತೇನೆ ಎಂದರು.
ಕಳೆದ ಎರಡು ದಶಕಗಳಲ್ಲಿ ಗುಜರಾತ್‍ನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಭೂತಪೂರ್ವ ಬದಲಾವಣೆಯಾಗಿದೆ. 20 ವರ್ಷಗಳ ಹಿಂದೆ, 100 ರಲ್ಲಿ 20 ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಅಂದರೆ, ಐದನೇ ಒಂದು ಭಾಗದಷ್ಟು ಮಗುವನ್ನ ಶಿಕ್ಷಣದಿಂದ ಹೊರಗಿಡಲಾಗಿತು. ಶಾಲೆಗೆ ಹೋಗುವ ಅನೇಕ ಮಕ್ಕಳು ಎಂಟನೇ ತರಗತಿಯನ್ನ ತಲುಪಿದ ಕೂಡಲೇ ಶಾಲೆಯಿಂದ ಹೊರಗುಳಿಯುತ್ತಿದ್ದರು. ಅದರಲ್ಲಿಯೂ ಸಹ, ದುರಾದೃಷ್ಟವೆಂದರೆ ಹೆಣ್ಣುಮಕ್ಕಳ ಸ್ಥಿತಿ ಇನ್ನೂ ಕೆಟ್ಟದಾಗಿತ್ತು. ಈ ಹಿಂದೆ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ ಎಂದರು.
ಇಂದು ಅಮೃತ ಕಾಲ, ಗುಜರಾತ್ ಬಹಳ ದೊಡ್ಡ ಹೆಜ್ಜೆ ಇಡುತ್ತಿದೆ. ಅಭಿವೃದ್ಧಿ ಹೊಂದಿದ ಭಾರತಕ್ಕೆ, ಇದು ಅಭಿವೃದ್ಧಿ ಹೊಂದಿದ ಗುಜರಾತ್ ನಿರ್ಮಿಸುವ ನಿಟ್ಟಿನಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದರು.
5ಜಿ ಮತ್ತು 4ಜಿ ನಡುವಿನ ವ್ಯತ್ಯಾಸವನ್ನ ವಿವರಿಸಿದ ಪ್ರಧಾನಿ ಮೋದಿ, 4ಜಿ ಬೈಸಿಕಲ್ ಆಗಿದ್ದರೆ, 5ಜಿ ವಿಮಾನ ಎಂದು ಹೇಳಿದರು. ನಾವು ಮೊದಲ First G ಯಿಂದ 4G ವರೆಗಿನ ಇಂಟರ್ನೆಟ್ ಸೇವೆಗಳನ್ನ ಬಳಸಿದ್ದೇವೆ. ಈಗ 5ಜಿ ದೇಶದಲ್ಲಿ ದೊಡ್ಡ ಬದಲಾವಣೆಯನ್ನ ತರಲಿದೆ. ಇಂದು 5ಜಿ, ಸ್ಮಾರ್ಟ್ ಸೌಲಭ್ಯಗಳು, ಸ್ಮಾರ್ಟ್ ತರಗತಿಗಳು, ಸ್ಮಾರ್ಟ್ ಬೋಧನೆ, ನಮ್ಮ ಶಿಕ್ಷಣ ವ್ಯವಸ್ಥೆಯು ಅದನ್ನ ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ಈಗ ವರ್ಚುಯಲ್ ರಿಯಾಲಿಟಿ, ಇಂಟರ್ನೆಟ್ ಆಫ್ ಥಿಂಗ್ಸ್‍ನ ಶಕ್ತಿಯನ್ನ ಸಹ ಶಾಲೆಗಳಲ್ಲಿ ಅನುಭವಿಸಬಹುದು. ಎರಡು ದಶಕಗಳಲ್ಲಿ, ಗುಜರಾತಿನ ಜನರು ತಮ್ಮ ರಾಜ್ಯ ಶಿಕ್ಷಣವನ್ನು ಪರಿವರ್ತಿಸಿದ್ದಾರೆ. ಈ ಎರಡು ದಶಕಗಳಲ್ಲಿ, ಗುಜರಾತ್ ನಲ್ಲಿ 1.25 ಲಕ್ಷಕ್ಕೂ ಹೆಚ್ಚು ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಲಾಗಿದೆ, ಎರಡು ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನ ನೇಮಕ ಮಾಡಿಕೊಳ್ಳಲಾಗಿದೆ.
ಹಿಂದೆ ಇಂಗ್ಲಿಷ್ ಭಾಷೆಯ ಜ್ಞಾನವನ್ನು ಬೌದ್ಧಿಕತೆಯ ಗುರುತು ಎಂದು ಹೇಳಿದ್ದಾರೆ. ವಾಸ್ತವದಲ್ಲಿ, ಇಂಗ್ಲಿಷ್ ಭಾಷೆ ಕೇವಲ ಸಂವಹನ ಮಾಧ್ಯಮವಾಗಿದೆ ಎಂದು ಪ್ರಧಾನಿ ತಿಳಿಸಿದರು. ತಮ್ಮ ಭಾಷಣದ ಸಮಯದಲ್ಲಿ ಮೋದಿ ನಿರಂತರವಾಗಿ ಹಿಂದಿಯಲ್ಲಿ ಆರಾಮದಾಯಕವಾಗಿ ಮಾತನಾಡಿದ್ದಾರೆ.
ಇಂಗ್ಲಿಷ್ ಭಾಷೆಯ ತೊಡಕಿನಿಂದಾಗಿ ಹಳ್ಳಿಗಳ ಅನೇಕ ಯುವ ಪ್ರತಿಭೆಗಳು ಇಂಗ್ಲಿಷ್ ಭಾಷೆಯಲ್ಲಿ ಪರಿಣತಿ ಇಲ್ಲದ ಕಾರಣ ವೈದ್ಯರು ಮತ್ತು ಎಂಜಿನಿಯರ್ ಆಗಲು ಸಾಧ್ಯವಾಗಿಲ್ಲ . ಆದರೆ ಹೊಸ ಶಿಕ್ಷಣ ನೀತಿಯು (ಎನ್‌ಇಪಿ) ದೇಶವನ್ನು ಇಂಗ್ಲಿಷ್ ಭಾಷೆಯನ್ನು ಸುತ್ತುವರೆದಿರುವ ಗುಲಾಮ ಮನಸ್ಥಿತಿಯಿಂದ ಹೊರತರಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.
ಮುಖ್ಯಮಂತ್ರಿಯಾಗಿ ನಾನು ಹಳ್ಳಿಯಿಂದ ಹಳ್ಳಿಗೆ ಹೋಗಿ ಪ್ರತಿಯೊಬ್ಬರೂ ತಮ್ಮ ಹೆಣ್ಣುಮಕ್ಕಳನ್ನ ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದ್ದೇನೆ. ಇದರ ಪರಿಣಾಮವಾಗಿ, ಇಂದು ಗುಜರಾತ್’ನ ಬಹುತೇಕ ಪ್ರತಿಯೊಬ್ಬ ಮಗ ಮತ್ತು ಮಗಳು ಶಾಲೆಯನ್ನ ತಲುಪಲು ಪ್ರಾರಂಭಿಸಿದ್ದಾರೆ. ಶಾಲೆಯ ನಂತರ, ಅವರು ಕಾಲೇಜಿಗೆ ಹೋಗಲು ಪ್ರಾರಂಭಿಸಿದರು. ಗುಜರಾತ್’ನಲ್ಲಿ ಮೊದಲ ಬಾರಿಗೆ ನಾವು ಶಿಕ್ಷಕರ ತರಬೇತಿ ವಿಶ್ವವಿದ್ಯಾಲಯ, ಶಿಕ್ಷಕರ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದೇವೆ ಎಂದರು.