ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರ ಅಸಡ್ಡೆಯ ವಿರುದ್ಧ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮಯ್ಯ ಆತ್ಮಹತ್ಯೆ ಪ್ರಕರಣದ ಆರೋಪಿ ತೆನ್ನೀರ್ ಮೈನಾ ಕೊಡಗಿನಲ್ಲೇ ಇದ್ದಾರೆ ಎಂದು ಮಾಹಿತಿ ನೀಡಲು ಪೊಲೀಸರಿಗೆ, ಸರ್ಕಲ್ ಇನ್ಸ್‌ಪೆಕ್ಟರ್‌ನಿಂದ ಡಿಸಿಪಿ ವರೆಗೆ ಕರೆ ಮಾಡಿದರೂ ಯಾರೂ ಫೋನ್ ರಿಸೀವ್ ಮಾಡಲಿಲ್ಲ ಎಂದು ಬೋಪಯ್ಯ ಆರೋಪಿಸಿದ್ದಾರೆ.
ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ. ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತ ಕರೆ ಮಾಡಿದರೆ ಸಾಕು ಪೊಲೀಸರು ಎದ್ದು ನಿಂತು ನಮಸ್ಕಾರ ಹೊಡೆದು ಮಾತನಾಡುತ್ತಾರೆ. ಇಂತಹ ಮನೋದೌರ್ಬಲ್ಯ ಇದ್ದರೆ ಏನು ಮಾಡೋದು? ಎಂದು ಪ್ರಶ್ನಿಸಿದ್ದಾರೆ.