ನೆಹರು ಬದಲು ಅಂಬೇಡ್ಕರ್ ಪ್ರಧಾನಿ ಆಗಿದ್ದೆಯಾದಲ್ಲಿ ಭಾರತ ಅಮೆರಿಕವನ್ನೇ ಹಿಂದಿಕ್ಕುತ್ತಿತ್ತು: ಎನ್. ರವಿಕುಮಾರ್

ಹೊಸದಿಗಂತ ವರದಿ, ಕಲಬುರಗಿ:

ಪಂಡಿತ್ ಜವಾಹರಲಾಲ್ ನೆಹರು ಬದಲು, ಏನಾದರೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದ ಮೊದಲ ಪ್ರಧಾನಮಂತ್ರಿ ಆಗಿದ್ದೆಯಾದಲ್ಲಿ,ವಿಶ್ವದ ದೊಡ್ಡಣ್ಣ ಎಂದೆನಿಸಿಕೊಳ್ಳುವ ಅಮೆರಿಕಾಕ್ಕೆ ಭಾರತ ಎಂದೊ ಸೈಡ್ ಹೊಡೆಯುತ್ತಿತ್ತು ಎಂದು ವಿಧಾನ ಪರಿಷತ್ ಸದಸ್ಯ, ಪರಿಷತ್ತಿನ ಮುಖ್ಯ ಸಚೇತಕ ಎನ್. ರವಿಕುಮಾರ್ ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಲಬುರಗಿ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ೭೫ ಬದಲಾಯಿಸಿದ್ದು ಯಾರು, ಬಲಪಡಿಸಿದ್ದು ಯಾರು ? ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ, ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು,ಈ ದೇಶದ ಮೊದಲ ಪ್ರಧಾನಮಂತ್ರಿ ಅಕಸ್ಮಾತ್ ಬಾಬಾ ಸಾಹೇಬ್ ಅಂಬೇಡ್ಕರ್ ಅಥವಾ ಸರ್ದಾರ್ ವಲ್ಲಭಭಾಯಿ ಪಟೇಲ್ ಏನಾದರೂ ಆಗಿದ್ದೆಯಾದಲ್ಲಿ ಅಮೆರಿಕದಂತಹ ರಾಷ್ಟ್ರಗಳನ್ನು ನಮ್ಮ ಭಾರತ ಹಿಂದಿಕ್ಕುತ್ತಿತ್ತು ಎಂದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಧಾನಿ ಆಗಬೇಕೆಂದು ೧೬ ರಾಜ್ಯಗಳ ಪೈಕಿ ೧೪ ರಾಜ್ಯ ತಮ್ಮ ಒಲವು ಪಟೇಲರ ಪರ ವ್ಯಕ್ತಪಡಿಸಿದ್ದವು.ಪಂಡಿತ್ ಜವಾಹರಲಾಲ್ ನೆಹರೂ ಪರ ಕೇವಲ ಎರಡು ರಾಜ್ಯಗಳು ಮಾತ್ರ ಒಲವು ತೋರಿದ್ದವು ಎಂದು ಹೇಳಿದ ಅವರು, ಎಲ್ಲಿಯವರೆಗೆ ಈ ದೇಶ ಉಳಿಯಲಿದೆ, ಅಲ್ಲಿಯವರೆಗೂ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧೀಜಿ ಉಳಿಯಲಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!