ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂವಿಂಧಾನ ಬದಲಾವಣೆ ಮಾಡಬೇಕು ಅನ್ನೊ ಜನರ ಮಧ್ಯೆ ನಾವಿದ್ದೇವೆ. ಅಂಬೇಡ್ಕರ್ ಒಂದು ವೇಳೆ ಕೆಳ ವರ್ಗದವರಿಗೆ ಮೀಸಲಾತಿ ಕೊಡದೇ ಹೋಗಿದ್ದರೆ ನಾವ್ಯಾರು ಬಿಳಿ ಬಟ್ಟೆ ಹಾಕಲು ಅಗುತ್ತಿರಲಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ನಮ್ಮ ದೇಶದಲ್ಲಿ ಬ್ರಾಹ್ಮಣ ಸಮುದಾಯವನ್ನು ಹೊರತುಪಡಿಸಿ ಉಳಿದ ಎಲ್ಲ ಜಾತಿ, ವರ್ಗದವರು ಶೂದ್ರರಾಗಿದ್ದಾರೆ. ಶೂದ್ರ ಕುಲಕ್ಕೆ ಸೇರಿದವರು ಏನಾದರೂ ಓಂ ನಮಃ ಶಿವಾಯ ಎಂದು ಹೇಳಿದರೆ ನಾಲಿಗೆ ಕತ್ತರಿಸುತ್ತಿದ್ದರು. ಹೀಗಾಗಿಯೇ ಅಂಬೇಡ್ಕರ್ ಅವರು ತಾವು ಹಿಂದುವಾಗಿ ಸಾಯುವುದಿಲ್ಲ ಎಂದಿದ್ದರು.
ಮಹಾತ್ಮಾ ಗಾಂಧಿಯೂ ಹಿಂದುನೆ, ಗೂಡ್ಸೆನೂ ಹಿಂದುನೆ. ನಾವು ಮಹಾತ್ಮಾ ಗಾಂಧಿ ಹಿಂದುತ್ವದವರು, ಅವರೆಲ್ಲಾ(ಬಿಜೆಪಿ) ಮಹಾತ್ಮಾ ಗಾಂಧಿಯನ್ನು ಕೊಂದ ಗೂಡ್ಸೆಯನ್ನು ಅನುಸರಿಸುವ ಹಿಂದುಗಳು. ಅಂಬೇಡ್ಕರ್ ಸುಮ್ಮ ಸುಮ್ಮನೇ ಹೇಳ್ತಾರಾ? ನಾನು ಹಿಂದು ಆಗಿ ಸಾಯಲ್ಲ ಅಂತಾ. ಹಿಂದುತ್ವದ ಹೆಸರಲ್ಲಿ ಶೋಷಣೆ ಮಾಡೋದನ್ನ ಅವರು ಸಹಿಸಲಿಲ್ಲ ಎಂದು ಇತಿಹಾಸದ ಮಾಹಿತಿ ನೀಡಿದರು.