ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಜಿಲ್ಲೆಯ ಜನರು ರಕ್ತ ಕೊಡುತ್ತೇವೆ ಹೊರತು ರಾಮನಗರ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗಲು ಯಾವುದೆ ಕಾರಣಕ್ಕೂ ಬಿಡುವುದಿಲ್ಲ ಎಂದು ಜೆಡಿಎಲ್‌ಪಿ ನಾಯಕ ಸುರೇಶ್ ಬಾಬು ಎಚ್ಚರಿಕೆ ನೀಡಿದ್ದಾರೆ.
ಹೇಮಾವತಿ ಎಕ್ಸ್‌ಪ್ರೆಸ್ ಕಾಲುವೆ ವಿರುದ್ಧದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಕ್ಸ್‌ಪ್ರೆಸ್ ಕಾಲುವೆ ಯೋಜನೆ ಎಲ್ಲಿ ಆರಂಭವಾಗುತ್ತದೆಯೋ ಅಲ್ಲಿಂದ ಮೆರವಣಿಗೆ ಆರಂಭಿಸಿದ್ದೇವೆ. ಇದು ನಮ್ಮ ಪ್ರದೇಶದ ರೈತರ ಉಳಿವು ಮತ್ತು ಅಳಿವಿನ ಸಮಸ್ಯೆಯಾಗಿದೆ.
ಇದರಿಂದ ಗುಬ್ಬಿ, ತುಮಕೂರು ಸೇರಿದಂತೆ ಎಲ್ಲ ತಾಲೂಕುಗಳ ಮೇಲೆ ಪರಿಣಾಮ ಬೀರಲಿದೆ. ಈ ಯೋಜನೆ ನಿಲ್ಲಿಸಬೇಕು ಎಂದು ಡಿ.ಕೆ.ಶಿವಕುಮಾರ್ ಅವರೊಂದಿಗೆ ಹಲವು ಬಾರಿ ಮಾತನಾಡಿದ್ದೇವೆ. ಅವರ ಧೋರಣೆ ಏನು ಎಂಬುದು ಗೊತ್ತಾಗಿದೆ. ನೀವು ಏನೇ ಮಾಡಿದರೂ ನೀರು ತೆಗೆದುಕೊಂಡು ಹೋಗುತ್ತೇವೆ ಅನ್ನೊದು ಅವರ ಧೋರಣೆ. ಅದೇಗೆ ನೀರನ್ನು ತೆಗೆದುಕೊಂಡು ಹೋಗುತ್ತೀರಾ ನೋಡೇ ಬಿಡೋಣ ಎಂದು ಸುರೇಶ್ ಬಾಬು ಸವಾಲ್ ಹಾಕಿದ್ದಾರೆ.