ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದಲ್ಲಿ ಹಿಂದುಗಳು ಸುರಕ್ಷಿತವಾಗಿದ್ದರೆ, ಮುಸ್ಲಿಮರು ಕೂಡ ಸೇಫ್ ಆಗಿ ಇರಲಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿ, 100 ಹಿಂದು ಕುಟುಂಬಗಳ ನಡುವೆ ಒಂದೇ ಮುಸ್ಲಿಂ ಕುಟುಂಬ ಇದ್ದರೂ ಅದು ಸುರಕ್ಷಿತವಾಗಿ ಇರಬಹುದು. ಆದರೆ 50 ಹಿಂದು ಕುಟುಂಬಗಳು 100 ಮುಸಲ್ಮಾನ ಕುಟುಂಬಗಳ ನಡುವೆ ಇರಲು ಸಾಧ್ಯವಿಲ್ಲ ಬಾಂಗ್ಲಾದೇಶ ಇದಕ್ಕೆ ಒಳ್ಳೆಯ ಉದಾಹರಣೆ ಎಂದರು.
2017ರ ಬಳಿಕ ಉತ್ತರಪ್ರದೇಶದಲ್ಲಿ ಯಾವುದೇ ಕೋಮು ಗಲಭೆ ನಡೆದಿಲ್ಲ. ಇಲ್ಲಿ ಮುಸ್ಲಿಮರು ಕ್ಷೇಮವಾಗಿದ್ದಾರೆ. ‘ಹಿಂದುಗಳು ಸುರಕ್ಷಿತವಾಗಿದ್ದರೆ ಮುಸ್ಲಿಮರು ಕೂಡ ಸುರಕ್ಷಿತ’ ಎಂದು ಹೇಳಿದರು.