ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಇಂದು ಜೆಡಿಎಸ್ ಪಕ್ಷದಲ್ಲಿ ಇದ್ದಿದ್ರೆ ಸಿಎಂ ಆಗುತ್ತಿರಲಿಲ್ಲ. ದೇವೇಗೌಡ ಮತ್ತು ಅವರ ಮಕ್ಕಳು ಸಿಎಂ ಆಗಲು ಬಿಡುತ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಚಾಮರಾಜನಗರದ ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 72ನೇ ಸಹಕಾರ ಸಪ್ತಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ಸಿಗೆ ಬಂದ ಮೇಲೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಜೆಡಿಎಸ್ ನಲ್ಲಿ ಯಾವುದೇ ಕಾರಣಕ್ಕೂ ಸಿಎಂ ಆಗುತ್ತಿರಲಿಲ್ಲ 2006 ವರೆಗೂ ಜಿ ಟಿ ದೇವೇಗೌಡ ಹಾಗೂ ನಾನು ಒಟ್ಟಿಗೆ ಇದ್ದೆವು ಆಗ ಜೆಡಿಎಸ್ ಪಕ್ಷದಿಂದ ನನ್ನನ್ನು ತೆಗೆದು ಹಾಕಿದರು. ಆದರೆ ಜಿಟಿ ದೇವೇಗೌಡ ಜೆಡಿಎಸ್ ಪಕ್ಷದಲ್ಲಿ ಉಳಿದುಕೊಂಡರು. ಆದ್ರೆ ಜಿ ಟಿ ದೇವೇಗೌಡ ಜೆಡಿಎಸ್ ನಲ್ಲೇ ಇದ್ದರೂ ಕೂಡ ನಮ್ಮ ಪರವಾಗಿ ಇದ್ದಾರೆ ಎಂದರು.
ನಮ್ಮ ಸರ್ಕಾರ ಎರಡೂವರೆ ವರ್ಷ ಆಗಿದೆ ಕರ್ನಾಟಕದ ಜನರ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ ನಾನು ಯಾವುದೇ ಜಾತಿ ಅಥವಾ ಮತ ಪಂಥದ ಪರವಾಗಿ ಇಲ್ಲ. ಎಲ್ಲರ ಪರವಾಗಿ ಕೆಲಸ ಮಾಡಿದ್ದೇನೆ ಮುಂದೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಜೆಡಿಎಸ್ ನಿಂದ ತೆಗೆದು ಹಾಕಿದ ಬಳಿಕ ಅಹಿಂದ ಸಂಘಟನೆಗೆ ಮುಂದಾದೆ ಆಗ ನನಗೆ ಕಾಂಗ್ರೆಸ್ ನಿಂದ ಕರೆ ಬಂತು ಅದಕ್ಕಾಗಿ ನಾನು ಕಾಂಗ್ರೆಸ್ ಪಕ್ಷಕ್ಕೆ ಹೋದೆ, ಹನುಮಂತನ 1983 ರಲ್ಲಿ ಲೋಕದಳಿಂದ ನಾನು ಮೊದಲ ಬಾರಿಗೆ ಶಾಸಕನಾದೆ ಜಾರ್ಜ್ ಫರ್ನಾಂಡಿಸ್ ಅವರನ್ನು ನಾನು ಫಾಲೋ ಮಾಡುತ್ತಿದ್ದೆ ಅವರು ಸೋಶಿಯಲಿಸ್ಟ್ ಮುಖಂಡರು ಹಾಗಾಗಿ ಅವರನ್ನು ನಾನು ಫಾಲೋ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

