ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಸ್ಪರ್ಧೆ ಮಾಡದೇ ಈಗಲೂ ನನಗೆ ಬೆಂಬಲ ನೀಡಿದ್ದಾರೆಂಬ ಡಿಕೆ.ಸುರೇಶ್ ಹೇಳಿಕೆ ಬಗ್ಗೆ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. 5 ವರ್ಷದ ಹಿಂದೆ ನಾನು ಸ್ಪರ್ಧೆ ಮಾಡಿದ್ದರೆ ಡಿ.ಕೆ.ಸುರೇಶ್ ಗೆಲ್ತಿರಲಿಲ್ಲ. ಈ ಬಾರಿ ಅವರನ್ನ ಸೋಲಿಸಲು ಮಂಜುನಾಥ್ ರನ್ನ ಅಖಾಡಕ್ಕಿಳಿಸಿದ್ದಾರೆ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಜಿ ಸಚಿವ ಯೋಗೇಶ್ವರ್ ತಿಳಿಸಿದ್ದಾರೆ.
ನಾನು ಪಾರ್ಲಿಮೆಂಟ್ಗೆ ಹೋಗಬಾರದೆಂದು ನಿರ್ಧರಿಸಿದ್ದೇನೆ. ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವುದು ನನ್ನ ಕೆಲಸ. ಡಿ.ಕೆ.ಸುರೇಶ್ ಅಸಮಾಧಾನದಿಂದ ಮಾತನಾಡ್ತಿದ್ದಾರೆ. ಡಾ.ಸಿ.ಎನ್.ಮಂಜುನಾಥ್ ಅವರ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ಯೋಗ್ಯತೆ ಇಲ್ಲ. ಡಾ.ಮಂಜುನಾಥ್ ವಿರುದ್ಧ ಗೆಲುವು ಸುಲಭವಿದ್ದರೆ ಕುಕ್ಕರ್, ಹಣ ಯಾಕೆ ಕೊಡ್ತಿದ್ದರು? ನಮ್ಮ ಗೆಲುವು ನಿಶ್ಚಿತ. ದೇವೇಗೌಡರು ಬಿಜೆಪಿ ಜೊತೆಗೆ ಒಂದಾಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
dum idre iga sparde maadi solisappa nela donku anthdrante kunilarade