ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಸಿಗೆ ಬರೋದಕ್ಕೆ ಇನ್ನೂ ಸಮಯ ಇದೆ ಎಂದುಕೊಂಡಿದ್ದ ಮಂದಿಗೆ ನೇಚರ್ ಶಾಕ್ ನೀಡಿದ್ದು, ಫೆಬ್ರವರಿಯಲ್ಲಿಯೇ ಅತಿಯಾದ ಬಿಸಿಲು ಜನರ ನಿದ್ದೆಗೆಡಿಸಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಬೆಂಗಳೂರು ನಗರದಲ್ಲಿ ಭಾನುವಾರ 33.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಕನಿಷ್ಠ ತಾಪಮಾನ 19.7 ಡಿಗ್ರಿ ಇತ್ತು. ಕರಾವಳಿ ಭಾಗದಲ್ಲಿ ಈಗಾಗಲೇ 38 ಡಿಗ್ರಿ ಸೆಲ್ಶಿಯಸ್‌ನಷ್ಟು ತಾಪಮಾನ ದಾಖಲಾಗಿದೆ.
ಬೆಂಗಳೂರಿನಲ್ಲಿ ಒಣ ಹವೆ ಇರುತ್ತದೆ ಎಂದು ಐಎಮ್‌ಡಿ ಮುನ್ಸೂಚನೆ ನೀಡಿದ್ದು, ಜನರು ಬೇಸಿಗೆಯ ಉಷ್ಣಾಂಶದಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಶಿವರಾತ್ರಿಯ ನಂತರ ಚಳಿಗಾಲ ಕೊನೆಗೊಂಡು ಬೇಸಿಗೆ ಆರಂಭವಾಗುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದ್ದು, ಫೆಬ್ರವರಿಯಲ್ಲಿ ಬೇಸಿಗೆಯಂತೆ ಭಾಸವಾಗುತ್ತಿದೆ ಎನ್ನಲಾಗಿದೆ.