ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಬೆಂಬಲಿಸಿ ಅಮೆರಿಕಾ ಸೇನೆಯನ್ನು ಕಳುಹಿಸಿದರೆ, ಪರಮಾಣು ಯುದ್ಧ ಅನಿವಾರ್ಯ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಯುಎಸ್ ಪಡೆಗಳನ್ನು ಉಕ್ರೇನ್‌ಗೆ ಕಳುಹಿಸಿದರೆ ಅದು ಯುದ್ಧಕ್ಕೆ ಉತ್ತೇಜನ ನೀಡಿದಂತಾಗುತ್ತದೆ.ಆ ತಪ್ಪು ಮಾಡಿದರೆ ‘ಪರಮಾಣು ಯುದ್ಧ’ ಅನಿವಾರ್ಯ ಎಂದಿದ್ದಾರೆ.
ಉಕ್ರೇನ್ ಮೇಲೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ.
ರಷ್ಯಾ ನಿಜವಾಗಿಯೂ ಪರಮಾಣು ಯುದ್ಧಕ್ಕೆ ಸಿದ್ಧವಾಗಿದೆಯೇ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುಟಿನ್, ಮಿಲಿಟರಿ-ತಾಂತ್ರಿಕ ದೃಷ್ಟಿಯಿಂದ ನಾವು ಸಿದ್ಧರಿದ್ದೇವೆ .ಆದರೆ, ಆತುರವಿಲ್ಲ ಮತ್ತು ಕೆಲವು ಕಾರ್ಯವಿಧಾನಗಳಿವೆ. ಈ ಬಗ್ಗೆ ಅಮೆರಿಕಕ್ಕೂ ಅರಿವಿದೆ ಎಂದರು.
ಉಕ್ರೇನ್‌ಗೆ ಬೆಂಬಲ ನೀಡಲು ಸೇನೆಯನ್ನು ಕಳುಹಿಸಿದರೆ, ಈ ಯುದ್ಧದಲ್ಲಿ ಅಮೆರಿಕ ನೇರವಾಗಿ ಮಧ್ಯಪ್ರವೇಶಿಸಿದಂತೆ ಆಗುತ್ತದೆ. ಹಾಗೇನಾದರೂ ನಡೆದರೆ ಖಂಡಿತಾ ಅದಕ್ಕೆ ಪ್ರತಿಕ್ರಿಯಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅದೇ ಸಮಯದಲ್ಲಿ, ರಷ್ಯಾ ಉಕ್ರೇನ್ ಜೊತೆ ಮಾತುಕತೆ ನಡೆಸಲು ಸಿದ್ಧವಾಗಿದೆ ಎಂದು ತಿಳಿದುಬಂದಿದೆ. ಆದರೆ.. ಆ ಚರ್ಚೆಗಳು ವಾಸ್ತವ ಸ್ಥಿತಿಗೆ ಅನುಗುಣವಾಗಿ ನಡೆಯಬೇಕು ಎಂದು ಸಲಹೆ ನೀಡಿದ್ದಾರೆ.
ಮತ್ತೊಂದೆಡೆ, ಪುಟಿನ್ ಹೇಳಿಕೆಗೆ ಅಮೆರಿಕ ತೀವ್ರವಾಗಿ ಪ್ರತಿಕ್ರಿಯಿಸಿದೆ. ಪರಮಾಣು ಯುದ್ಧದ ಬೆದರಿಕೆಯ ಎಚ್ಚರಿಕೆಗಳು ಬೇಜವಾಬ್ದಾರಿಯುತವಾಗಿವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ.