ಮೋದಿಯನ್ನು ದೇವರೊಂದಿಗೆ ಚರ್ಚೆಗೆ ಬಿಟ್ಟರೆ, ನಾನೇನು ಸೃಷ್ಟಿ ಮಾಡಿದೆ ಎಂಬ ಗೊಂದಲಕ್ಕೊಳಗಾಗುತ್ತಾನೆ: ರಾಹುಲ್ ಗಾಂಧಿ ವ್ಯಂಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ದೇವರೊಂದಿಗೆ ಚರ್ಚೆಗೆ ಕೂರಿಸಿದರೆ, ಅವರು ಬ್ರಹ್ಮಾಂಡ ಕಾರ್ಯನಿರ್ವಹಿಸುವ ಬಗ್ಗೆ ಮಾಡುವ ವಿವರಣೆಗೆ ದೇವರು ನಾನೇನು ಸೃಷ್ಠಿ ಮಾಡಿದ್ದೇನೆ ಎಂಬ ಗೊಂದಲಕ್ಕೊಳಗಾಗುತ್ತಾನೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿಯವರು (Rahul Gandhi) ವ್ಯಂಗ್ಯವಾಡಿದ್ದಾರೆ.

ಬುಧವಾರ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದ (San Francisco) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿಗರು (BJP) ವಿಜ್ಞಾನಿಗಳಿಗೆ ವಿಜ್ಞಾನವನ್ನು ವಿವರಿಸುತ್ತಾರೆ. ಇತಿಹಾಸಕಾರರಿಗೆ ಇತಿಹಾಸವನ್ನು ವಿವರಿಸುತ್ತಾರೆ.ಅಷ್ಟೇ ಅಲ್ಲದೆಸೈನ್ಯ ಹಾಗೂ ವಾಯುಪಡೆಗೂ ಪಾಠ ಮಾಡಲು ಹೋಗುತ್ತಾರೆ. ಆದರೆ ಅವರಿಗೆ ಅದ್ಯಾವುದರ ಬಗ್ಗೆಯೂ ತಿಳುವಳಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಕೆಲವು ತಿಂಗಳ ಹಿಂದೆ ನಾವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಿದೆವು. ಪಾದಯಾತ್ರೆ ಮಾಡುತ್ತಾ ಜನರೊಂದಿಗೆ ಬೆರೆಯುತ್ತಾ ಹೋಗುತ್ತಿದ್ದಾಗ ಜನಸಾಮಾನ್ಯರನ್ನು ಮಾತನಾಡಿಸಿದಾಗ ಅವರ ಕಷ್ಟಗಳು ಅರ್ಥವಾಗತೊಡಗಿದವು. ನಮ್ಮಲ್ಲಿ ರಾಜಕೀಯ ಮಾಡುತ್ತಿರುವ ಆಡಳಿತ ವ್ಯವಸ್ಥೆ ಜನಸಾಮಾನ್ಯರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಅರಿತುಕೊಂಡಿದ್ದೇವೆ.

ಬಿಜೆಪಿ, ಆರ್ ಎಸ್ ಎಸ್ ನಿಯಂತ್ರಿಸುತ್ತಿವೆ. ಇಲ್ಲಿ ಜನರಿಗೆ ಬೆದರಿಕೆ ಹಾಕಲಾಗುತ್ತದೆ ತನಿಖಾ ಏಜೆನ್ಸಿಗಳನ್ನು ಬಳಸಲಾಗುತ್ತದೆ. ಜನರನ್ನು ಸಂಪರ್ಕಿಸಲು ಅವರ ಕಷ್ಟ ಸುಖ ತಿಳಿಯಲು ನಾವು ಭಾರತದ ದಕ್ಷಿಣದ ತುದಿಯಿಂದ ಶ್ರೀನಗರದವರೆಗೆ ಪಾದಯಾತ್ರೆ ನಡೆಸಿದೆವು ಎಂದರು.

ಪ್ರಧಾನಿ ಮೋದಿಯವರ ವಿರುದ್ಧ ವ್ಯಂಗ್ಯವಾಡಿದ ರಾಹುಲ್ ಗಾಂಧಿ, ಭಾರತದಲ್ಲಿ, ನಾವು ವಿವಿಧ ಭಾಷೆಗಳು, ವಿವಿಧ ಧರ್ಮಗಳ ಜನರೊಂದಿಗೆ ಬೆಳೆದಿದ್ದೇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದರ ಮೇಲೆ ದಾಳಿ ಮಾಡಲಾಗುತ್ತಿದೆ. ಭಾರತದಲ್ಲಿ ಗಾಂಧೀಜಿ ಮತ್ತು ಗುರುನಾನಕ್ ಜಿ ಅವರಂತಹ ಮನೋಭಾವ ಹೇಗೆ ಎಂದರೆ ನೀವು ಎಲ್ಲವನ್ನೂ ತಿಳಿದಿದ್ದೀರಿ, ನಿಮಗೆ ಎಲ್ಲವೂ ಗೊತ್ತು ಎಂದು ಭಾವಿಸಬಾರದು ಎಂಬುದಿದೆ. ಆದರೆ ಭಾರತದ ಕೆಲವು ಗುಂಪುಗಳು ತಮಗೆ ಎಲ್ಲವೂ ತಿಳಿದಿದೆ ಎಂದು ಭಾವಿಸುವುದು ಒಂದು ರೋಗವಾಗಿದೆ ಎಂದರು.

ಜಗತ್ತು ತುಂಬಾ ದೊಡ್ಡದಾಗಿದೆ. ಯಾವುದೇ ವ್ಯಕ್ತಿಗೆ ಎಲ್ಲವನ್ನೂ ತಿಳಿದುಕೊಳ್ಳಲು ಜಟಿಲವಾಗಿದೆ. ನೀವು ಮೋದಿಯವರನ್ನು ದೇವರೊಂದಿಗೆ ಕೂರಿಸಿದರೆ, ಅವರು ದೇವರಿಗೆ ವಿವರಿಸುತ್ತಾರೆ, ಬ್ರಹ್ಮಾಂಡವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳುತ್ತಾರೆ, ದೇವರೇ ಅವರ ಮಾತಿಗೆ ಗೊಂದಲಕ್ಕೊಳಗಾಗಬಹುದು. ರಾಹುಲ್ ಗಾಂಧಿಯ ಮಾತಿಗೆ ಅಲ್ಲಿ ಸೇರಿದ್ದ ನೂರಾರು ಅನಿವಾಸಿ ಭಾರತೀಯ ನಾಗರಿಕರು ನಕ್ಕರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!