March 28, 2026
Saturday, March 28, 2026
spot_img

GETTING BETTER | ಮೈಗೆ ಆರಾಮಿಲ್ಲ ಅಂದ್ರೆ ಮನಸ್ಸಿಗೇ ಜಾಸ್ತಿ ತೊಂದ್ರೆ, ಇದ್ರಿಂದ ಹೊರಕ್ಕೆ ಬರೋದು ಹೇಗೆ?

ಬೇಸಿಗೆ ಬಂತೆಂದರೆ ಧೂಳು, ವಾತಾವರಣದಲ್ಲಿ ಬದಲಾವಣೆಯಿಂದಾಗಿ ಅನಾರೋಗ್ಯಗಳು ಸಾಮಾನ್ಯ ಆಗಿವೆ. ಆದರೆ ಒಮ್ಮೆ ಬರುವ ಆರೋಗ್ಯ ಸಮಸ್ಯೆ ವಾರಗಟ್ಟಲೆಯಾದರೂ ಹೋಗದೇ ಕಿರಿಕಿರಿ ನೀಡುತ್ತದೆ. ಈ ಸಮಯದಲ್ಲಿ ದೇಹಕ್ಕಾಗುವಷ್ಟೇ ನೋವು, ಮನಸ್ಸಿಗೂ ಆಗುತ್ತದೆ. ಈ ಸಮಯದಲ್ಲಿ ಏನು ಮಾಡಬಹುದು?

ರೆಸ್ಟ್‌ ಮಾಡ್ತಿದ್ದೇನೆ ಎಂದು ಗಿಲ್ಟ್‌ ಮಾಡಿಕೊಳ್ಳಬೇಡಿ. ದೇಹಕ್ಕೆ ಅನಾರೋಗ್ಯ ಕಾಡಿದಾಗ ಎಲ್ಲವನ್ನೂ ಬಿಟ್ಟು ಮಲಗಬೇಕಾದ್ದು ಅನಾರೋಗ್ಯ. ಒತ್ತಡ ಮಾಡಿಕೊಂಡರೆ ರೋಗಕ್ಕೆ ಊಟ ಕೊಟ್ಟಂತೆ. ಇಮ್ಯುನಿಟಿಯನ್ನು ಉಪವಾಸ ಇಟ್ಟಂತೆ.

ನಿಮ್ಮ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಿ. ಎಂದಿನಂತೆ ಜಿಮ್‌ ಹೋಗೋಕೆ ಆಗೋದಿಲ್ಲ, ಎಂದಿನಂತೆ ಊಟ ತಿಂಡಿ ಹಿಡಿಸೋದಿಲ್ಲ, ಎಂದಿನಂತೆ ಕೆಲಸಕ್ಕೆ ಹಾಜರಾಗೋಕೆ ಆಗೋದಿಲ್ಲ. ಆದರೆ ಇದೆಲ್ಲವೂ ಸಾಮಾನ್ಯ. ಬೇಕಂತ ಮಾಡಿಕೊಂಡದ್ದಲ್ಲ.

ನಿಮ್ಮ ಬಗ್ಗೆ ಸ್ವಲ್ಪ ಕರುಣೆ ಇಟ್ಟುಕೊಳ್ಳಿ. ಹುಷಾರಿಲ್ಲ ಅಂದ್ರೆ ಪರವಾಗಿಲ್ಲ, ಇನ್ನೆರಡು ದಿನದಲ್ಲಿ ಸರಿಯಾಗಿ ಬಿಡ್ತೀನಿ, ರೆಸ್ಟ್‌ ಮಾಡಿದರೆ ಆರೋಗ್ಯವಾಗಿ ಬದಲಾಗ್ತೀನಿ ಎಂದು ಹೇಳಿಕೊಳ್ಳಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !