September 30, 2026
Wednesday, September 30, 2026
spot_img

ಪಲ್ಯ, ಗ್ರೇವಿ & More 47 | ದೇಹವನ್ನು ತಂಪು ಮಾಡೋ ಹೆಸರುಕಾಳು, ಈ ರೀತಿ ಟೇಸ್ಟಿ ಗ್ರೇವಿ ಮಾಡಿ ಎಲ್ಲಾದ್ಕೂ ತಿನ್ನಬಹುದು

ಸಾಮಾಗ್ರಿಗಳು
ಹೆಸರುಕಾಳು
ಮೆಂತ್ಯೆಸೊಪ್ಪು
ಈರುಳ್ಳಿ
ಟೊಮ್ಯಾಟೊ
ಕ್ಯಾಪ್ಸಿಕಂ
ಬೀನ್ಸ್‌

ರುಬ್ಬಲು
ಕಾಯಿ
ಕೊತ್ತಂಬರಿ ಸೊಪ್ಪು
ಹಸಿಮೆಣಸು
ಚಕ್ಕೆ
ಲವಂಗ
ಶುಂಠಿ
ಬೆಳ್ಳುಳ್ಳಿ
ಸಾಂಬಾರ್‌ ಪುಡಿ

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ನಂತರ ಈರುಳ್ಳಿ ಹಾಕಿ ಬಾಡಿಸಿ
ಆಮೇಲೆ ಟೊಮ್ಯಾಟೊ, ಮೆಂತ್ಯೆ ಸೊಪ್ಪು, ಬೇಕಾದ ತರಕಾರಿ ಹಾಕಿ ಬಾಡಿಸಿ
ನಂತರ ಹೆಸರುಕಾಳು ಹಾಕಿ ಮಿಕ್ಸ್‌ ಮಾಡಿ
ಆಮೇಲೆ ಉಪ್ಪು, ಹಾಕಿ ಮಿಕ್ಸಿಯಲ್ಲಿ ರುಬ್ಬಿದ ಮಸಾಲೆ ಹಾಕಿ
ಉಪ್ಪು ಅಡ್ಜಸ್ಟ್‌ ಮಾಡಿ ನೀರು ಹಾಕಿ ಒಂದೇ ವಿಶಲ್‌ ಕೂಗಿಸಿದ್ರೆ ಪಲ್ಯ ರೆಡಿ

Must Read