ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಅನುದಾನ ವಿಚಾರದಲ್ಲಿ ಅನ್ಯಾಯಮಾಡುತ್ತಿದೆ. ಆದರೆ ಇದನ್ನು ಪ್ರಶ್ನಿಸೋಕೆ ಬೊಮ್ಮಾಯಿ, ಅಶೋಕ್‌ಗೆ ಧೈರ್ಯ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿದ ಆರ್. ಅಶೋಕ್ ಒಂದು ಸುಳ್ಳನ್ನು ನೂರು ಬಾರಿ ಹೇಳಿದ್ರೆ ಅದು ನಿಜ ಆಗೋದಿಲ್ಲ, ನೂರನೇ ಬಾರಿಗೂ ಅದು ಸುಳ್ಳೇ ಆಗಿರುತ್ತದೆ. ಯುಪಿಎ ಅವಧಿಗೆ ಹೋಲಿಕೆ ಮಾಡಿದರೆ ಈ ಬಾರಿ ಮೂರು ಪಟ್ಟು ಹೆಚ್ಚು ಅನುದಾನ ಕರ್ನಾಟಕಕ್ಕೆ ಸಿಕ್ಕಿದೆ ಎಂದಿದ್ದಾರೆ.
ಒಂದು ಸುಳ್ಳನ್ನ ನೂರು ಬಾರಿ ಹೇಳಿದರೆ ಅದು ಸತ್ಯವಾಗುವುದಿಲ್ಲ ಸಿಎಂ @siddaramaiah ಅವರೇ.
ಯುಪಿಎ ಅವಧಿಗೆ ಹೋಲಿಸಿದರೆ ಎನ್ ಡಿಎ ಅವಧಿಯಲ್ಲಿ ಕರ್ನಾಟಕಕ್ಕೆ 3 ಪಟ್ಟು ಹೆಚ್ಚು ಹಣ ದೊರೆತಿದೆ ಎನ್ನುವ ಸತ್ಯ ನಿಮಗೂ ಗೊತ್ತು.
14 ಬಜೆಟ್ ಮಂಡಿಸಿರುವ ಸ್ವಯಂ ಘೋಷಿತ ಆರ್ಥಿಕ ತಜ್ಞರಾದ ಸಿಎಂ @siddaramaiah ಅವರು ಪದೇ ಪದೇ ರಾಜ್ಯದ ಜನತೆಯ… https://t.co/4tBpNpX2Q0 pic.twitter.com/j4uAtZxD8j
— R. Ashoka (ಆರ್. ಅಶೋಕ) (@RAshokaBJP) February 5, 2024