ಸಿದ್ದರಾಮಯ್ಯಗೆ ತಾಕತ್ ಇದ್ದರೆ ವಿಜಯೇಂದ್ರ ಭ್ರಷ್ಟಾಚಾರ ಹೊರತರಲಿ: ಯತ್ನಾಳ್ ಸವಾಲ್

ಹೊಸದಿಗಂತ ವರದಿ, ವಿಜಯಪುರ:

ಡಿ.ಕೆ. ಶಿವಕುಮಾರ್ ಹಾಗೂ ವಿಜಯೇಂದ್ರ ಇಬ್ಬರದ್ದು ಹೊಂದಾಣಿಕೆ ಇದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನವರಿಗೆ ತಾಕತ್ತು, ಧಮ್ ಇದ್ದರೆ ಕೋವಿಡ್ ನಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ಆಗಲಿ. ಒಟ್ಟಾರೆ ಎಲ್ಲ ಭ್ರಷ್ಟಾಚಾರದ ತನಿಖೆ ಆಗಲಿ. ಭ್ರಷ್ಟ ಕುಟುಂಬ ನಾನು ಒಪ್ಪಲ್ಲ ಎಂದರು.

ಮೊದಲು ವಿಜಯೇಂದ್ರ ಭ್ರಷ್ಟಾಚಾರ ಹೊರಹಾಕಲಿ, ಪ್ರಧಾನಿ ನರೇಂದ್ರ ಮೋದಿ ಅವರು ಸಹಿತ ಈ ವಿಚಾರವಾಗಿ ಗಮನ ಹರಿಸಲಿ. ವಿಜಯೇಂದ್ರ ಇವರುಗಳ ಪೈಲ್ ಗಳಿಗೆ ಡಿಕೆಶಿ ತಕ್ಷಣ ಸಹಿ ಮಾಡುತ್ತಾರೆ. ಇಬ್ಬರು ಭ್ರಷ್ಟರಿದ್ದಾರೆ ಎಂದರು.

ಯಡಿಯೂರಪ್ಪ ನಿಮಗೆ ನೈತಿಕತೆ ಇದ್ದರೆ ಯಾವುದೇ ವೇದಿಕೆ ಹತ್ತಬಾರದು. ನಿಮ್ಮ ಹಗರಣ ಎಷ್ಟಿದೆ ಮೊದಲು ನೋಡಿಕೊಳ್ಳಿ, ಭ್ರಷ್ಟಾಚಾರ ಮಾಡಿದವರೇ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದರೆ ಮಹತ್ವ ಇಲ್ಲ ಎಂದರು.

ಯಡಿಯೂರಪ್ಪ ಅಧಿಕಾರದಿಂದ ಇಳಿಯಲು ಕಾರಣವೇ ವಿಜಯೇಂದ್ರ. ವಾಲ್ಮೀಕಿ ಹಗರಣ ಮುಖ್ಯ ಮಂತ್ರೀಗಳೇ ಒಪ್ಪಿಕೊಂಡಿದ್ದಾರೆ. ಈ ಹಗರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಇದ್ದಾರೆ, ರಾಹುಲ್ ಗಾಂಧಿ ಕೂಡಾ ಇದರ ಹಿಂದೆ ಇದ್ದಾರೆ ಎಂದರು.

ರಾಜ್ಯಪಾಲರ ಅಧಿಕಾರ ಇವರು ಪ್ರಶ್ನೆ ಮಾಡುತ್ತಾರೆ. ರಾಜ್ಯಪಾಲರು ಕಾನೂನು ಬದ್ದವಾಗಿ ಇದೆಲ್ಲವನ್ನು ಕೇಳಿದ್ದಾರೆ ಎಂದರು.

ಸಿದ್ದರಾಮಯ್ಯ ಶಿಕಾರಿಪುರದಲ್ಲಿ ಹಾಲುಮತ ಸಮಾಜದ ವೀಕ್ ಕ್ಯಾಂಡಿಡೇಟ್ ಹಾಕಿ ವಿಜಯೇಂದ್ರ ಗೆಲ್ಲಸಿಲು ಸಹಾಯ ಮಾಡಿದರು. ವರುಣಾದಲ್ಲಿ ಸೋಮಣ್ಣನವರನ್ನು ಯಡಿಯೂರಪ್ಪ ಗ್ಯಾಂಗ್ ನವರು ಸೋಲಿಸಿದರು‌ ಎಂದರು.

ವಿಜಯೇಂದ್ರನನ್ನು ತಕ್ಷಣ ಹೈ ಕಮಾಂಡ್ ವಜಾ ಮಾಡಬೇಕು. ಯಡಿಯೂರಪ್ಪ ಸಿಎಂ ಇದ್ದಾಗ ಮಾಡಿದ ಸಹಿಗಳು ಸಹಿತ ಯಾರದು ಎಂಬುದು ತನಿಖೆ ಮಾಡಲಿ. ಎಪ್ ಎಸ್ ಎಲ್ ವರದಿ ಪ್ರಕಾರ ತನಿಖೆ ಮಾಡಲಿ ಎಂದರು.

ವಿಜಯೇಂದ್ರನ ಹಾಗೆ ನಾನು‌ ಸಿಡಿಗಳನ್ನು ಇಟ್ಟುಕೊಂಡಿಲ್ಲ. ಯಡಿಯೂರಪ್ಪ ‌ಕುಟುಂಬವೇ ಹೈ ಕಮಾಂಡ್ ನಿಮಗೆ ಬೇಕಾದರೆ ಯತ್ನಾಳ ಅವರನ್ನು ಉಚ್ಚಾಟನೆ ಮಾಡಲಿ. ನಾನು ರಾಜ್ಯದ ಜನರಿಗೆ ಉಚ್ಚಾಟನೆ‌ ಮಾಡಿರುವ ವಿಚಾರವಾಗಿ ರಾಜ್ಯದ ಜನತೆಗೆ ತಿಳಿಸುವೆ. ನಾನು ಈಗ ಗಟ್ಟಿಯಾಗಿದ್ದೇವೆ, ಉಚ್ಚಾಟನೆ ಮಾಡಿದರೂ ಸಿದ್ದರಿದ್ದೇವೆ ಎಂದರು.

ರಾಜ್ಯ ಸರ್ಕಾರ ಎಲ್ಲ ರಂಗದಲ್ಲಿ ಸಂಪೂರ್ಣವಾಗಿ ವಿಫಲಾಗಿದೆ, ರಾಜ್ಯಪಾಲರಿಗೆ ಅಧಿಕಾರ ಇದೆ ಅವರ ಅಧಿಕಾರ ಅದನ್ನು ಅವರು ಬಳಸಿದ್ದಾರೆ. ರಾಜ್ಯಪಾಲರು ದಲಿತ ಇದ್ದಾರೆ ಎಂಬ ಕಾರಣಕ್ಕೆ ಈ ಕಾಂಗ್ರೆಸ್ ನವರು ಗಂಭೀರ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ವಿಜೇಯೇಂದ್ರ ಕಂಡ್ರೆ ನಿಮಗೆ ಭಾಳಾ ಪ್ರೀತಿ,,ಗೊತ್ತಿರುವ ವಿಷಯ ನೀವೇ ಹೊರಗೆ ಹಾಕಿದರೆ ನಿಮ್ಮ ಕೀರ್ತೀನೂ ಹೆಚ್ಚಾಗಬಹುದು

LEAVE A REPLY

Please enter your comment!
Please enter your name here

error: Content is protected !!