ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸುದೀಪ್ ಬಿಜೆಪಿಗೆ ಸಪೋರ್ಟ್ ಮಾಡ್ತಾರೆ ಎನ್ನುವ ವಿಷಯ ಎಲ್ಲೆಡೆ ಹರಡಿದ್ದು, ಭಾರೀ ಸಂಚಲನ ಮೂಡಿಸಿದೆ.
ಕನ್ನಡ ಚಿತ್ರರಂಗದಲ್ಲಿ ಸುದೀಪ್ ಫ್ಯಾನ್ ಫಾಲೋಯಿಂಗ್ ದೊಡ್ಡದಿದೆ. ಅವರು ಉತ್ತಮ ನಾಯಕ. ದೇಶದಲ್ಲೇ ಅತ್ಯುತ್ತಮ ಕಲಾವಿದರ ಪಟ್ಟಿಯಲ್ಲಿ ಸುದೀಪ್ ಕೂಡ ಇರ‍್ತಾರೆ. ಹೀಗಿರುವಾಗ ಸುದೀಪ್‌ರಿಂದ ನಮಗೆ ಸಪೋರ್ಟ್ ಸಿಕ್ಕಿದ್ರೆ ಪಕ್ಷಕ್ಕೆ ಲಾಭ ಖಂಡಿತ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ನಟ ಸುದೀಪ್ ಬಿಜೆಪಿ ಸೇರ್ಪಡೆ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಸುದೀಪ್‌ಗೆ ಬೆದರಿಕೆ ಪತ್ರವೂ ಬಂದಿದ್ದು, ಖಾಸಗಿ ವಿಡಿಯೋ ಲೀಕ್ ಆಗಲಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.