Sunday, January 11, 2026

ಆರೋಪ ನಿಜವಾಗಿದ್ರೆ CBI ತನಿಖೆ ಮಾಡಲಿ: ನರೇಗಾ ಅಕ್ರಮ ಆರೋಪಕ್ಕೆ ಡಿಕೆಶಿ ತಿರುಗೇಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಯಲ್ಲಿ 11 ಲಕ್ಷ ಕೋಟಿ ರೂ. ಅಕ್ರಮ ನಡೆದಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಆರೋಪಗಳು ಸತ್ಯವಾಗಿದ್ದರೆ ಸಿಬಿಐ ತನಿಖೆಗೆ ವಹಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಮನರೇಗಾ ವಿಚಾರದಲ್ಲಿ ಬಹಿರಂಗ ಚರ್ಚೆಗೆ ತಾವು ಸಿದ್ಧ ಎಂದರು. “ಆ ಮನರೇಗಾ, ಈ ಮನರೇಗಾ ನಡುವೆ ಏನು ವ್ಯತ್ಯಾಸ ಇದೆ ಎನ್ನುವುದನ್ನು ಜನರ ಮುಂದೆ ಚರ್ಚಿಸೋಣ. ದಿನಾಂಕ ನಿಗದಿಪಡಿಸೋಣ. ಬಿಜೆಪಿಯ ರಾಷ್ಟ್ರೀಯ ನಾಯಕರು, ಕೇಂದ್ರ ಸರ್ಕಾರದ ಪ್ರತಿನಿಧಿಗಳನ್ನು ಚರ್ಚೆಗೆ ಕಳುಹಿಸಲಿ. ಯಾವುದೇ ಟಿವಿ ಚಾನೆಲ್‌ನಲ್ಲಿ ಬಹಿರಂಗ ಡಿಬೇಟ್ ಆಗಲಿ” ಎಂದು ಹೇಳಿದರು.

ಇದನ್ನೂ ಓದಿ: FOOD | ಬೆಳಗಿನ ಇಡ್ಲಿ ಉಳಿದಿದ್ರೆ ಬಿಸಾಡ್ಬೇಡಿ, ಅದ್ರಿಂದ ಯಮ್ಮಿ ಮಂಚೂರಿಯನ್ ಟ್ರೈ ಮಾಡಿ!

11 ಲಕ್ಷ ಕೋಟಿ ರೂ. ಅಕ್ರಮ ನಡೆದಿದ್ದರೆ ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ಪುನರುಚ್ಚರಿಸಿದ ಅವರು, ಮನರೇಗಾ ಕುರಿತು ಎರಡು ದಿನಗಳ ವಿಶೇಷ ಅಧಿವೇಶನ ನಡೆಸಲು ತೀರ್ಮಾನಿಸಿದ್ದೇವೆ ಎಂದರು. ಈ ಅಧಿವೇಶನದಲ್ಲಿ ಯೋಜನೆಯ ಅಂಶಗಳನ್ನು ವಿಸ್ತೃತವಾಗಿ ಚರ್ಚಿಸಿ, ಬಿಜೆಪಿ ನಡೆಸುತ್ತಿರುವ ಅಪಪ್ರಚಾರಕ್ಕೆ ಉತ್ತರ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

error: Content is protected !!