ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ‘ಡಿಸೆಂಬರ್ ಒಳಗೆ ಸಿಎಂ ಚೇರ್ ಖಾಲಿ ಆಗದಿದ್ದರೆ ನನ್ನ ಬಂದು ಕೇಳಿ’ ಎಂದು ಈ ಹಿಂದೆ ತಾವು ನೀಡಿದ್ದ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ದಾವಣಗೆರೆಯ ಚನ್ನಗಿರಿಯಲ್ಲಿ ಮಾತನಾಡಿದ ಶಾಸಕ, ಡಿಸೆಂಬರ್ ಒಳಗೆ ಸಿಎಂ ಬದಲಾವಣೆಯಾಗ್ತಾರೆ, ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗ್ತಾರೆ. ಇಷ್ಟೇ ಈಗ ಸದ್ಯಕ್ಕೆ ಏನು ಮಾತನಾಡಲ್ಲ, ಡಿಸೆಂಬರ್‌ವರೆಗೂ ಕಾದು ನೋಡಿ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಹೆಸರು ಕೇಳಿ ಬಂದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸದ್ಯ ಕೆಪಿಸಿಸಿ ಅಧ್ಯಕ್ಷ ಹುದ್ದೆ ಖಾಲಿ ಇಲ್ಲ. ಖಾಲಿಯಾದ ಮೇಲೆ ಯಾರಿಗೆ ಅರ್ಹತೆ ಇರುತ್ತೆ ಅವರು ಆಗ್ತಾರೆ ಎಂದರು.