ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಹೈಕಮಾಂಡ್ಗೆ ಧಮ್ ಇದ್ರೆ ಸಿಎಂ ಹಾಗೂ ಡಿಸಿಎಂ ವಿರುದ್ಧ ತನಿಖೆಗೆ ಆದೇಶ ಮಾಡಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎಂದಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಶೋಭಾ ಕರಂದ್ಲಾಜೆ, ಕಾಲ್ತುಳಿತದಲ್ಲಿ ಮಕ್ಕಳನ್ನ ಕಳೆದುಕೊಂಡ ಪೋಷಕರು ಕಣ್ಣೀರು ಹಾಕ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಕೈಯಲ್ಲಿ ರಕ್ತ ಅಂಟಿದೆ. ತಮ್ಮ ಕೈಯಲ್ಲಿರುವ ರಕ್ತವನ್ನು ಪೊಲೀಸರ ಮೂತಿಗೆ ಒರೆಸ್ತಿದ್ದಾರೆ. ಒಬ್ಬ ಪ್ರಾಮಾಣಿಕ ಕಮಿಷನರ್ ಅನ್ನು ಸಸ್ಪೆಂಡ್ ಮಾಡಿದ್ದಾರೆ. ಬೆಂಗಳೂರಿನ ಇತಿಹಾಸದಲ್ಲೇ ಇದೊಂದು ಕಪ್ಪು ಚುಕ್ಕೆ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದ್ರು.
ಕಾಂಗ್ರೆಸ್ ಸರ್ಕಾರದವರು ಆರ್ಸಿಬಿ ಸೆಲೆಬ್ರೇಷನ್ ಅನ್ನು ಹೆಣದ ಮೇಲೆ ಮಾಡಿದ್ದಾರೆ. ಒಬ್ಬ ಜವಾಬ್ದಾರಿಯುತ ಸರ್ಕಾರ ಈ ರೀತಿ ನಡೆದುಕೊಳ್ಳುತ್ತಾ ಎಂದು ಕೇಂದ್ರ ಸಚಿವೆ ಪ್ರಶ್ನೆ ಮಾಡಿದ್ರು. ನಮ್ಮ ಪೊಲೀಸರನ ಮಧ್ಯರಾತ್ರಿ ವರೆಗೂ ಕೆಲಸ ಮಾಡಿದ್ದಾರೆ. ನೀವು ಅನುಮತಿ ಕೊಟ್ಟಿಲ್ಲ ಅಂದ್ರೂ ಹೇಗೆ ಎರಡು ಸೆಲೆಬ್ರೇಷನ್ ಆಯ್ತು? ಪೊಲೀಸರನ್ನು ಯಾಕೆ ಸಸ್ಪೆಂಡ್ ಮಾಡಿದ್ರಿ? ಎಂದು ಪ್ರಶ್ನೆ ಮಾಡಿದ್ರು.