ಹೊಸದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗಾಗಿ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಸುವ ಮೊದಲು ಮಾತಾಡಿದ ಡಿಕೆ ಶಿವಕುಮಾರ್ ನೆರೆದಿದ್ದ ಜನರಿಗೆ ರಾಜಕಾರಣಿಗಿಂತ ಹೆಚ್ಚು ಕವಿಯಾಗಿ ಕಂಡಿದ್ದಾರೆ.
ಕಮಲ ಕೆರೆಯಲ್ಲಿದ್ದರೆ ಚಂದ, ಎಲೆ ಹೊಲದಲ್ಲಿದ್ದರೆ ಚಂದ ಹಾಗೆಯೇ, ದಾನ ಧರ್ಮ ಮಾಡುವ ಕೈ ಆಧಿಕಾರದಲ್ಲಿದ್ದರೆ ಚಂದ ಅಂತ ಹೇಳಿ ಚನ್ನಪಟ್ಟಣದ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಕಾಂಗ್ರೆಸ್ ಪಕ್ಷದ ಯೋಗೇಶ್ವರ್ ಶಾಸಕನಾಗಬೇಕು ಎಂದು ಹೇಳಿದ್ದಾರೆ.