ರಾಮನಗರದ ಹೆಸರೇನಾದ್ರೂ ಬದಲಾವಣೆ ಮಾಡಿದ್ರೆ ಉಪವಾಸ ಸತ್ಯಾಗ್ರಹ ಮಾಡ್ತೀನಿ: ಎಚ್‌ಡಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮನಗರ ಜಿಲ್ಲೆ ಹೆಸರು ಬದಲಾವಣೆ ಬಗ್ಗೆ ಡಿಸಿಎಂ ಡಿಕೆಶಿ ಮಾತನಾಡ್ತಿದ್ದಾರೆ, ಈ ರೀತಿ ಮಾಡಿದ್ರೆ ನಾನು ಸುಮ್ಮನಿರೋದಿಲ್ಲ, ಉಪವಾಸ ಸತ್ಯಾಗ್ರಹ ಮಾಡ್ತೀನಿ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ಹಾಗೂ ಹಾರೋಹಳ್ಳಿ ತಾಲೂಕಿರುವ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಬಗ್ಗೆ ಚಿಂತನೆ ನಡೆದಿದೆ.

ಇದಕ್ಕೆ ಎಚ್‌ಡಿಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ನನ್ನ ಆರೋಗ್ಯ ಲೆಕ್ಕಿಸದೇ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ, ಹೆಸರು ಬದಲಾವಣೆ ಒಪ್ಪೋದಿಲ್ಲ ಎಂದಿದ್ದಾರೆ.

ರಾಮನಗರದ ಜೊತೆ ನನಗೆ ನಂಟಿದೆ, ಭಾವನಾತ್ಮಕ ಸಂಬಂಧ ಇದೆ, ನಾನು ಹುಟ್ಟಿದ್ದು ಹಾಸನದಲ್ಲೇ ಇರಬಹುದು ಆದರೆ ನನ್ನ ಅಂತ್ಯ ರಾಮನಗರದಲ್ಲಿ. ರಾಮನಗರ ಜನತೆ ನನ್ನ ಜೊತೆ ಕೈಜೋಡಿಸಬೇಕು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!