90 ದಿನಗಳು ದೂರವಾಣಿ ಸಂಖ್ಯೆ ಬಳಕೆ ಮಾಡದಿದ್ರೆ, ನಂಬರ್ ಬೇರೆಯವರಿಗೆ: ಟ್ರಾಯ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಂದಾದಾರರ ಕೋರಿಕೆ ಮೇರೆಗೆ ಅಥವಾ 90ದಿನಗಳವರೆಗೂ ಮೊಬೈಲ್ ನಂಬರ್ ಬಳಸದೇ ಹೋದಲ್ಲಿ ಆ ಸಂಖ್ಯೆಯನ್ನು ನಿಷ್ಟ್ರಿಯಗೊಳಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ತಿಳಿಸಿದೆ.

ಇಷ್ಟೇ ಅಲ್ಲದೆ ಒಟ್ಟಾರೆ 45 ದಿನದವರೆಗೂ ವಾಟ್ಸಾಪ್ ಸಕ್ರಿಯವಾಗಿ ಇಲ್ಲವಾದರೆ, ಅದೇ ನಂಬರ್‌ನ ವಾಟ್ಸಾಪ್ ಖಾತೆಯನ್ನು ಬೇರೆ ಮೊಬೈಲ್‌ನಲ್ಲಿ ಸಕ್ರಿಯಗೊಳಿಸಿದರೆ ಹಳೆಯ ವಾಟ್ಸಾಪ್ ಡೇಟಾವನ್ನು ವಾಟ್ಸಾಪ್ ತೆಗೆದುಹಾಕಲಿದೆ.

ಮೊಬೈಲ್ ದೂರವಾಣಿ ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಿದರೆ ಅಥವಾ ಚಂದಾದಾರರ ಕೋರಿಕೆಯ ಮೇರೆಕೆ ಸಂಪರ್ಕ ಕಡಿತಗೊಳಿಸಿದರೆ ಕನಿಷ್ಠ 90 ದಿನ ಅವಧಿವರೆಗೂ ಅದನ್ನು ಹೊಸ ಚಂದಾದಾರರಿಗೆ ನೀಡಿರುವುದಿಲ್ಲ, 90 ದಿನದ ನಂತರ ಅದನ್ನು ಬೇರೆಯವರಿಗೆ ನೀಡಲಾಗುತ್ತದೆ.

ಬಳಕೆ ಮಾಡದೆ ಇದ್ದ ಕಾರಣಕ್ಕೆ ದೂರವಾಣಿ ಸಂಖ್ಯೆಗಳ ಕಡಿತ ಮಾಡಿದ ನಂತರ ಅಥವಾ ಸಂಪರ್ಕ ನಿಷ್ಕ್ರಿಯಗೊಳಿಸಿದ ನಂತರ ದತ್ತಾಂಶವನ್ನು ದುರ್ಬಳಕೆ ಮಾಡುವ ಆತಂಕ ಇತ್ತೀಚೆಗೆ ಹೆಚ್ಚಾಗಿದೆ. ಈ ಬಗ್ಗೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಸ್.ವಿ.ಎನ್ ಭಟ್ಟಿ ಅವರ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತ್ತು.

ಈ ಎಲ್ಲ ಅಂಶಗಳನ್ನು ಪರಿಗಣಿಸಿದ ಕೋರ್ಟ್ ತಮಿಳುನಾಡಿನ ರಾಜೇಶ್ವರಿ ಎಂಬ ವಕೀಲರು ಸಲ್ಲಿಸಿದ ರಿಟ್ ಅರ್ಜಿಯನ್ನು ವಜಾಗೊಳಿಸಿದೆ. ಉಪಯೋಗ ಮಾಡುತ್ತಿಲ್ಲ ಎನ್ನುವ ಕಾರಣದಿಂದಾಗಿ ನಿರ್ದಿಷ್ಟ ಸಂಖ್ಯೆ ನಿಷ್ಕ್ರಿಯಗೊಂಡ ನಂತರ ಅರ್ಜಿದಾರರು ವಾಟ್ಸಾಪ್ ಡೇಟಾ ದುರ್ಬಳಕೆಯನ್ನು ಪ್ರಶ್ನೆ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!