ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಕ್ಕೆ ಅನುದಾನ ಕೊರತೆ ಆಗಿದ್ದರೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಗಳ ಜೊತೆ ಕೂತು ಚರ್ಚೆ ಮಾಡಲಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಸಿಎಂ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈಗಲಾದರೂ ಕೇಂದ್ರದ ಸಭೆಗೆ ಹೋಗಿದ್ದಾರೆ. ಇಷ್ಟು ದಿನ ಕೇಂದ್ರದ ಸಭೆಗೆ ಹೋಗಿರಲಿಲ್ಲ. ಈಗ 16ನೇ ಹಣಕಾಸು ಆಯೋಗದ ಸಭೆಗೆ ಹೋಗಿದ್ದಾರೆ. ಅವರಿಗೆ ಹೃದಯ ತುಂಬಿ ಧನ್ಯವಾದ ಹೇಳ್ತೇನೆ ಎಂದು ಹೇಳಿದ್ದಾರೆ.
ಅನುದಾನ ಕೊರತೆ ಆಗಿದ್ದರೆ ರಾಜ್ಯದ ಜನರ ಪರವಾಗಿ ಪ್ರಧಾನಿ ಮೋದಿ ಅವರ ಜೊತೆ ಕೂತು ಚರ್ಚೆ ಮಾಡಲಿ. ಕುಮಾರಸ್ವಾಮಿ ಅವರು ಕೂಡಾ ಸಿಎಂ ಜೊತೆ ನಿಂತು ಅನುದಾನ ಕೊಡಿಸ್ತಾರೆ ಎಂದು ಸಲಹೆ ನೀಡಿದ್ದಾರೆ.