ಹೊಸದಿಗಂತ ವರದಿ ಮಂಡ್ಯ :
ಜಾತಿಗಣತಿಯಲ್ಲಿ ನ್ಯೂನತೆಗಳಿದ್ದರೆ ಸರಿಪಡಿಸುತ್ತೇವೆ. ಅಭಿಪ್ರಾಯ ನೀಡುವಂತೆ ಸಂಪುಟ ಸಚಿವರನ್ನು ಕೇಳಲಾಗಿತ್ತು. ಆದರೆ ಯಾರೊಬ್ಬರೂ ಇನ್ನೂ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಾಗಮಂಗಲ ತಾಲೂಕು ದೊಡ್ಡಬಾಲ ಗ್ರಾಮದಲ್ಲಿ ನಡೆದ 14 ಕೂಟಗಳ ಬೀರ ದೇವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಸಂಪುಟ ಸಭೆಯಲ್ಲಿ ಅಭಿಪ್ರಾಯ ತಿಳಿಸುವಂತೆ ಸೂಚಿಸಿದ್ದೇನೆ. ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ವಿಂಗ್ ಕಮಾಂಡರ್ ಆದರೂ ಸರಿ, ಯಾರೇ ಆದರೂ ಸರಿ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಲು ತಿಳಿಸಿದ್ದೇನೆ ಎಂದು ವಿಂಗ್ ಕಮಾಂಡರ್ ಹಲ್ಲೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಹಿಂದಿ ಹೇರಿಕೆಗೆ ಬಿಡುವುದಿಲ್ಲ. ಈಗಾಗಲೇ ಹೇಳಿದ್ದೇನೆ. ಇದು ಸರ್ಕಾರದ ಸ್ಟ್ಯಾಂಡ್. ಈಗ ದ್ವಿಭಾಷಾ ನೀತಿ ಜಾರಿಲ್ಲಿದೆ. ತ್ರಿಭಾಷಾ ಸೂತ್ರ ಇಲ್ಲ. ನಾವು ಕನ್ನಡ ಮತ್ತು ಇಂಗ್ಲೀಷ್ ಅಷ್ಟೆ ಕಲಿಸೋದು ಎಂದು ಹೇಳಿದರು.