ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರು ಜಿಲ್ಲೆಯಲ್ಲಿ 800 ಕ್ಕೂ ಹೆಚ್ಚು ಅಂಗನವಾಡಿ ಕಟ್ಟಡಗಳ ಬಾಡಿಗೆಯನ್ನು ಸರ್ಕಾರ ಕಟ್ಟಿಲ್ಲ, ಅಂಗನವಾಡಿ ಬಾಡಿಗೆ ಕಟ್ಟೋಕೂ ಯೋಗ್ಯತೆ ಇಲ್ಲದ ಸರ್ಕಾರ ಇದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ರಾಯಚೂರಿನಲ್ಲಿ ಒಟ್ಟಾರೆ 808 ಅಂಗನವಾಡಿ ಕಟ್ಟಡಗಳು ಎಂಟು ತಿಂಗಳಿನಿಂದ ಬಾಡಿಗೆ ಕಟ್ಟಿಲ್ಲ. ಈ ಕೋಟ್ಯಂತರ ರೂಪಾಯಿ ಎಲ್ಲಿ ಹೋಯ್ತು? ಯಾಕೆ ಬಿಡುಗಡೆ ಮಾಡ್ತಿಲ್ಲ? ಅಂಗನವಾಡಿ ಕಾರ್ಯಕರ್ತೆಯರು ಬಡ್ಡಿಗೆ ಸಾಲ ತಂದು ಬಾಡಿಗೆ ಕಟ್ಟುತ್ತಿದ್ದಾರೆ. ಎಷ್ಟೋ ಬಾಣಂತಿಯರಿಗೆ, ಗರ್ಭಿಣಿಯರಿಗೆ ಪೋಷಕಾಂಶ ಇರುವ ಆಹಾರ ಸಿಗುತ್ತಿರುವುದು ಅಂಗನವಾಡಿಯಲ್ಲಿ ಮಾತ್ರ ಇದರ ಬಗ್ಗೆ ಅರಿವಿಲ್ಲವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡವರ ಪಾಲಿನ ಆಸರೆಯಾದ ಅಂಗನವಾಡಿಗಳಿಗೆ ಬಾಡಿಗೆ ಕಟ್ಟೋಕೂ ಯೋಗ್ಯತೆ ಇಲ್ಲ ಎಂತಾದ್ರೆ ನಿಮ್ಮ ಸರ್ಕಾರ ಇದ್ದರೆಷ್ಟು ಸತ್ತರೆಷ್ಟು ಎಂದಿದ್ದಾರೆ.