ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಜನಪ್ರಿಯ ಗ್ಯಾರೆಂಟಿ ಗೃಹಜೋತಿ ಜೂ.11ರಿಂದ ಜಾರಿಯಾಗಲಿದೆ.
ಯೋಜನೆಯ ಮಾರ್ಗಸೂಚಿಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಜನರಿಗೆ ಸಾಕಷ್ಟು ಗೊಂದಗಳು ಎದುರಾಗಿವೆ. ಸರ್ಕಾರ ಇದೀಗ ಹೊಸ ನಿಬಂಧನೆ ಹಾಕಿದ್ದು, ಯೋಜನೆ ಲಾಭ ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಹೇಳಿದೆ.
ಜತೆಗೆ ಗೃಹ ವಿದ್ಯುತ್ ಬಳಕೆದಾರರಲ್ಲಿ ಒಂದಕ್ಕಿಂತ ಹೆಚ್ಚಿನ ಮೀಟರ್ ಇದ್ದಲ್ಲಿ ಒಂದು ಮೀಟರ್‌ಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಬಾಡಿಗೆ ಮನೆಯಲ್ಲಿ ವಾಸಿಸುವರಿಗೆ ಉಚಿತ ವಿದ್ಯುತ್ ಸಿಗುವುದಿಲ್ಲ. ೨೦೦ ಯುನಿಟ್ ಕರೆಂಟ್ ಬಳಸಬಹುದು ಎಂದುಕೊಂಡಿದ್ದ ಬಾಡಿಗೆದಾರದಿಂದ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ.
ಸ್ವಂತ ಮನೆಗಳಲ್ಲಿ ವಾಸಿಸುವವರಿಗೆ ಕರೆಂಟ್ ಬಿಲ್ ಅಷ್ಟೇನೂ ಹೊರೆಯಾಗುವುದಿಲ್ಲ, ಸ್ವಂತ ಮನೆ ಕಟ್ಟಲಾಗದ, ಬಾಡಿಗೆ ಮನೆಯಲ್ಲಿ ವಾಸಿಸುವ ಮಿಡಲ್ ಕ್ಲಾಸ್ ಜನರಿಗೆ ಗೃಹ ಜ್ಯೋತಿ ಯೋಜನೆ ಹೆಚ್ಚು ಅವಶ್ಯಕತೆ ಇತ್ತು. ಆದರೆ ಇದೀಗ ಲೆಕ್ಕಾಚಾರ ಉಲ್ಟಾ ಆಗಿದ್ದು, ಬಾಡಿಗೆದಾರ ನಿರಾಸೆಯಾಗಿದ್ದಾನೆ.