ಮಾನವ ದೇಹದಲ್ಲಿ ಅತ್ಯಂತ ಪ್ರಮುಖವಾದ ಅಂಗಗಳಲ್ಲಿ ಮೂತ್ರಪಿಂಡ ಒಂದು. ಇದು ದೇಹದ ಅಶುದ್ಧಿಯನ್ನು ಹೊರಹಾಕಿ ದ್ರವ ಸಮತೋಲನ ಕಾಪಾಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಸ್ವಸ್ಥ ಜೀವನಶೈಲಿ ಮತ್ತು ಅಸಮರ್ಪಕ ಆಹಾರ ಪದ್ಧತಿಯಿಂದ ಮೂತ್ರಪಿಂಡದ ಸಮಸ್ಯೆಗಳು ಹೆಚ್ಚುತ್ತಿವೆ. ಮೂತ್ರಪಿಂಡ ಹಾನಿಗೊಳಗಾದಾಗ ದೇಹವು ಅನೇಕ ಸೂಚನೆಗಳನ್ನು ನೀಡುತ್ತದೆ. ಅವುಗಳನ್ನು ಸರಿಯಾದ ಸಮಯದಲ್ಲಿ ಗಮನಿಸಿದರೆ ಗಂಭೀರ ಹಂತಕ್ಕೆ ಮುನ್ನವೇ ಚಿಕಿತ್ಸೆ ಪಡೆಯಬಹುದು.
ಮೂತ್ರಪಿಂಡ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಪಾದಗಳಲ್ಲಿ ಊತ ಕಾಣಿಸಿಕೊಳ್ಳುವುದು ಸಾಮಾನ್ಯ. ಲಿಕ್ವಿಡ್ ಸಂಗ್ರಹಣೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ಇದೇ ರೀತಿ ಮುಖದಲ್ಲಿ ಅಕಸ್ಮಾತ್ ಉಬ್ಬರ ಕಂಡುಬಂದರೂ ಅದು ಕಿಡ್ನಿ ಸಮಸ್ಯೆಯ ಸಂಕೇತವಾಗಿರಬಹುದು. ಕೈಗಳಲ್ಲಿ ಮತ್ತು ಬೆರಳುಗಳಲ್ಲಿ ಆಗಾಗ್ಗೆ ಊತ ಅಥವಾ ನೋವು ಕಂಡುಬಂದರೆ ಕೂಡ ಎಚ್ಚರಿಕೆ ಅಗತ್ಯ.
ಹೊಟ್ಟೆಯ ಒಂದು ಭಾಗದಲ್ಲಿ ನಿರಂತರ ಉಬ್ಬರ ಅಥವಾ ನೋವು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬಾರದು. ದೀರ್ಘಕಾಲ ತಡೆಯದೆ ವೈದ್ಯರ ಸಂಪರ್ಕ ಮಾಡುವುದು ಸೂಕ್ತ. ಹಾಗೆಯೇ ಕಣ್ಣುಗಳ ಸುತ್ತಮುತ್ತಾಗುವ ಉಬ್ಬರವೂ ಮೂತ್ರಪಿಂಡ ಸಮಸ್ಯೆಯ ಲಕ್ಷಣವಾಗಿರಬಹುದು. ಇವುಗಳ ಹೊರತಾಗಿ ಇನ್ನೂ ಅನೇಕ ಕಾರಣಗಳಿಂದ ಊತವಾಗಬಹುದು. ಆದ್ದರಿಂದ ನಿಖರ ಕಾರಣವನ್ನು ತಿಳಿಯಲು ತಜ್ಞರ ಸಲಹೆ ಪಡೆಯುವುದು ಅನಿವಾರ್ಯ.
ಮೂತ್ರಪಿಂಡದ ಆರೋಗ್ಯ ಕಾಪಾಡಿಕೊಳ್ಳುವುದು ದೇಹದ ಸಮಗ್ರ ಆರೋಗ್ಯಕ್ಕೆ ಅತ್ಯಂತ ಅಗತ್ಯ. ದೇಹ ನೀಡುವ ಸಣ್ಣ ಲಕ್ಷಣಗಳನ್ನು ನಿರ್ಲಕ್ಷಿಸದೆ ವೈದ್ಯಕೀಯ ನೆರವನ್ನು ಪಡೆಯುವುದು ದೊಡ್ಡ ಅಪಾಯ ತಪ್ಪಿಸುವಲ್ಲಿ ಸಹಕಾರಿ. ಆರೋಗ್ಯಕರ ಜೀವನಶೈಲಿ ಮತ್ತು ಸರಿಯಾದ ಆಹಾರ ಪದ್ಧತಿಯ ಮೂಲಕ ಮೂತ್ರಪಿಂಡದ ಕಾಯಿಲೆಗಳನ್ನು ತಡೆಗಟ್ಟಬಹುದು.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)