ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್‌ಗೆ ವಿಶ್ರಾಂತಿಗಾಗಿ ಜಮೀರ್, ಖಾದರ್ ಜೊತೆ ಸಿದ್ದರಾಮಯ್ಯ ಹೋಗಿದ್ರೆ, ಅವರಿಬ್ಬರನ್ನೂ ಬಿಟ್ಟು ಉಗ್ರರು ನಿಮಗೇ ಗುಂಡು ಹೊಡೆಯುತ್ತಿದ್ದರು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸಿಎಂ ಕಾಲೆಳೆದಿದ್ದಾರೆ.
ಸ್ವಲ್ಪ ರೆಸ್ಟ್ ಮಾಡೋಣ ಅಂತ ಜಮೀರ್, ಯುಟಿ ಖಾದರ್ ಜೊತೆ ಸಿದ್ದರಾಮಯ್ಯ ಪಹಲ್ಗಾಮ್‌ಗೆ ಹೋಗಿದ್ರೆ, ಮೊದಲು ಜಮೀರ್ ಕೇಳಿ ಬಿಟ್ಟು ಬಿಡುತ್ತಿದ್ದರು. ಬಳಿಕ ಯು.ಟಿ ಖಾದರ್ ಕೇಳಿ ಮುಸ್ಲಿಂ ಅಂತ ಅವರನ್ನೂ ಬಿಡುತ್ತಿದ್ದರು. ಆದರೆ ನಿಮ್ಮನ್ನ ಕೇಳಿದಾಗ ಸಿದ್ದರಾಮಯ್ಯ ಅಂದಿದ್ರೆ 10 ಗುಂಡು ಹೊಡೆಯುತ್ತಿದ್ರು ಎಂದು ಟಾಂಗ್ ಕೊಟ್ಟಿದ್ದಾರೆ.
ನೀವು ಎಷ್ಟೇ ಮಸೀದಿ ಕಟ್ಟಿ, ಹಜ್ ಯಾತ್ರೆಗೆ ಕಳಿಸಿದ್ರೂ ಹಿಂದೂ ಎನ್ನುವ ಕಾರಣಕ್ಕೆ ನಿಮಗೆ ಗುಂಡಿಕ್ಕುತ್ತಿದ್ರು. ಸೆಕ್ಯುರಿಟಿ ಲ್ಯಾಪ್ಸ್ ಬಗ್ಗೆ ಮಾತನಾಡುತ್ತೀರಿ. ಮುಂದೇನು? ಹೀಗೆ ಮಾತನಾಡುತ್ತಲೇ ಇರುತ್ತೀರಾ? ಮುಸ್ಲಿಮರಿಗಾಗಿ ಮೋದಿಯನ್ನ ಬೈಯುತ್ತಲೇ ಇರುತ್ತೀರಾ? ಎಂದು ಪ್ರಶ್ನಿಸಿದ್ದಾರೆ.