Friday, December 19, 2025

ಮುಂದೆ ಗಾರೆ ಕೆಲಸ ಮಾಡ್ಬಾರ್ದು ಅಂತ ಸ್ಕೂಲಿಗೆ ಕಳಿಸಿದ್ರೆ ಟೀಚರ್ರೇ ಕೂಲಿ ಮಾಡಿಸ್ತಿದ್ದಾರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಾಲಾ ಮಕ್ಕಳಿಂದ ಬಾತ್‌ರೂಮ್‌ ತಿಕ್ಕಿಸಿಕೊಳ್ಳೋದು, ತಮ್ಮದೇ ಮನೆಗೆ ದಿನಸಿ ತರಿಸಿಕೊಳ್ಳೋದಿ ಇಂಥ ಶಿಕ್ಷಕರ ಬಗ್ಗೆ ಸುದ್ದಿ ಕೇಳಿದ್ದೀರಿ. ಆದರೆ ಮಕ್ಕಳಿಂದ ಗಾರೆ ಕೆಲಸ ಮಾಡಿಸೋ ಬಗ್ಗೆ ಗೊತ್ತಿದ್ಯಾ?

ಮಕ್ಕಳು ಓದಲು ಶಾಲೆಗೆ ಹೋಗುತ್ತಾರೆ. ಇನ್ನು ಪೋಷಕರು ಸಹ ಲಕ್ಷಾಂತರ ರೂಪಾಯಿ ಫೀ ಕಟ್ಟಿ ತಮ್ಮ ಮಕ್ಕಳು ನಾಲ್ಕು ಅಕ್ಷರ ಕಲಿತು ವಿದ್ಯಾವಂತರಾಗಲಿ ಎಂದು ಶಾಲೆಗೆ ಕಳುಹಿಸುತ್ತಾರೆ. ಆದ್ರೆ, ಶಿಕ್ಷಕರೇ ಮಕ್ಕಳನ್ನ ಕಟ್ಟಡ ಕಾರ್ಮಿಕರಂತೆ ದುಡಿಸಿಕೊಂಡಿರುವ ಪ್ರಕರಣವೊಂದು ಹಾಸನ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ.

ಶಿಕ್ಷಕರು ಮೇಸ್ತ್ರಿಯಂತೆ ಮುಂದೆ ನಿಂತುಕೊಂಡು ಮಕ್ಕಳಿಂದ ಶಾಲೆ ಕಟ್ಟಡ ನಿರ್ಮಾಣ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಸ್ವರ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಿಂದ ರೆಡಿಯಾಗಿ ಶಾಲೆಗೆ ಬಂದ ಮಕ್ಕಳಿಂದ ಗಾರೆ ಕೆಲಸ ಮಾಡಿಸಲಾಗಿದೆ. ವಿದ್ಯಾರ್ಥಿಗಳು ಸಿಮೆಂಟ್ ಮತ್ತು ಇಟ್ಟಿಗೆ ಹೊತ್ತೊಯ್ಯುತ್ತಿರುವ ವೀಡಿಯೋ ವೈರಲ್ ಆಗಿದೆ.

ಇನ್ನು ಪುಟ್ಟ ಮಕ್ಕಳಿಂದ ಸಿಮೆಂಟ್ ಇಟ್ಟಿಗೆ ಸಾಗಿಸುವ ವಿಡಿಯೋ ನೋಡಿ ಸ್ಥಳೀಯರು ಆಕ್ರೋಶಗೊಂಡಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಿವುದು ವಿದ್ಯವಂತರಾಗಲೆಂದು. ನಾವೇ ಮಕ್ಕಳನ್ನು ಈ ರೀತಿಯ ಕೆಲಸ ಮಾಡಿಸಲ್ಲ. ಆದ್ರೆ, ಪ್ರಜ್ಞಾವಂತರಾಗಿರುವ ಶಿಕ್ಷಕರೇ ಮಕ್ಕಳಿಂದ ಸೀಮೆಂಟ್, ಇಟ್ಟಿಗೆ ಸಾಗಿಸುವ ಕೆಲಸ ಮಾಡಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

error: Content is protected !!