ಹೊಸದಿಗಂತ ವರದಿ, ಹಾವೇರಿ (ಶಿಗ್ಗಾವಿ) :
ನಾವು ವಿಕಸಿತ ಭಾರತ ಮಾಡಲು ಹೊರಟರೇ ರಾಜ್ಯ ಕಾಂಗ್ರೆಸ್ ತುಷ್ಠಿಕರಣದ ರಾಜಕಾರಣ ಮೂಲಕ ಸಂಕುಚಿತ ಭಾರತ ಮಾಡಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ತಡಸ ಗ್ರಾಮದಲ್ಲಿ ಮಾತನಾಡಿದ ಅವರು, ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಪ್ರಕರಣದ
ಆರೋಪಿಗಳನ್ನ ಅಮಾಯಕರು ಎಂದು ಹೇಳ ಹೊರಟಿದ್ದಾರೆ. ಈ ಪ್ರಕರಣಗಳ ಸಾಕ್ಷಿಗಳನ್ನು ವೀಕ್ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ತಾಲಿಬಾನ್ ರೀತಿ ಸರ್ಕಾರ ಮಾಡಲು ನಿರ್ಧರಿಸಿದಂತಿದೆ. ದೇಶದ, ಈ ನೆಲದ ಎಂಥದ್ದೇ ಬೆಲೆ ಕೊಟ್ಟಾದರೂ ಅವರನ್ನು ಉಳಿಸಬೇಕು ಅಂತ ಕಾಂಗ್ರೆಸ್ ನಿರ್ಧಾರ ಮಾಡಿದಂತಿದೆ ಎಂದು ಜೋಶಿ ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಶ್ರೀಕಾಂತ ಪೂಜಾರಿ ಮೇಲೆ 16 ಕೇಸ್ ಎಂದರು. 16 ಕೇಸ ಎಂದು ಯಾರು ರಿಪೋರ್ಟ್ ನೀಡಿದ್ದಾರೆ ಅವರ ಮೇಲೆ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಜೋಶಿ ಪ್ರಶ್ನಿಸಿದರು.
ಒಂದು ವರ್ಗದ ತುಷ್ಠಿಕರಣ ಮಾಡುವದಕ್ಕಾಗಿ ಇನ್ನೊಂದು ವರ್ಗಕ್ಕೆ ಯಾವ ರೀತಿ ಅನ್ಯಾಯ ಮಾಡಲಿಕ್ಕೆ ನೀವು ತಯಾರಿದೀರಿ. ಇದು ತುಷ್ಠಿಕರಣದ ಪರಕಾಷ್ಠೆ ಎಂದ ಅವರು , ಇದು ಒಂದು ರೀತಿಯ ಐಎಸ್ ಐಎಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಈ ತಾಲಿಬಾನಿಗಳು ಅಪಘಾನಿಸ್ತಾನದಲ್ಲಿ ಸರ್ಕಾರ ನಡೆಸುವ ರೀತಿಯಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರ ನಡೆಸುತ್ತಿದ್ದಾರೆ ಎಂದು ಪ್ರಹ್ಲಾದ್ ಜೋಶಿ
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದರು.
ಜನ ಇದಕ್ಕೆ ಅವಕಾಶ ನೀಡುವುದಿಲ್ಲ ಭಾರತೀಯರ ರಕ್ತದಲ್ಲಿ ಭಾರತೀಯರ ಪರಂಪರೆಯಲ್ಲಿ ಪ್ರಜಾಪ್ರಭುತ್ವವಿದೆ. ನೀವು ಈ ರೀತಿ ಹುಚ್ಚುಚ್ಚು ಮಾಡಲು ಹೊರಟರೇ ಜನ ನಿಮ್ಮನ್ನ ಎಲ್ಲಿಗೆ ಸೇರಿಸಬೇಕು ಅಲ್ಲಿಗೆ ಸೇರಿಸುತ್ತಾರೆ ಎಂದು ಎಚ್ಚರಿಸಿದರು.
ಶ್ರೀಕಾಂತ ಪೂಜಾರಿ ಬಂಧನದಲ್ಲಿ ನಮ್ಮ ಪಾತ್ರವಿದೆ ಎಂಬ ಜಗದೀಶ ಶೆಟ್ಟರ್ ಆರೋಪಕ್ಕೆ ಪ್ರತಿಕ್ರಿಯಿಸಿ ಸರ್ಕಾರದಲ್ಲಿ ಅವರ ಮಾತು ನಡೆಯುವದಿಲ್ಲಾ ನಮ್ಮ ಮಾತು ನಡೆಯುತ್ತದೆ ಅಂದಂಗ ಆಯಿತಲ್ಲ ಎಂದು ವ್ಯಂಗ್ಯವಾಡಿದರು. ಹುಬ್ಬಳ್ಳಿ ಗಲಭೆ ವಿಚಾರದಲ್ಲಿ ಯಾವಾಗ ಬಿಜೆಪಿ ಸರ್ಕಾರ ಅಮಾಯಕರ ಮೇಲಿನ ಪ್ರಕರಣಗಳನ್ನು ವಾಪಸಾತಿಗೆ ಮುಂದಾಗಿತ್ತು ಅವಾಗm ಇವರೇ ಸಿಎಂ, ಸಚಿವ ಪ್ರತಿಪಕ್ಷ ನಾಯಕರಾಗಿದ್ದರು. ಇವರೇನು ನಮಗೆ ಆ ಸ್ಥಾನಗಳಿಗೆ ಹೋಗಲು ಬಿಡಲಿಲ್ಲಾ ಎಂದು ಶೆಟ್ಟರ್ ವಿರುದ್ದ ಹರಿಹಾಯ್ದರು. ಅವರು ಕಾಂಗ್ರೆಸ್ಸಿಗೆ ಹೋಗಿ ಈ ನಾಲ್ಕು ತಿಂಗಳಾಗಿವೆ. ಶೆಟ್ಟರ ಹತಾಶೆಯಾಗಿದ್ದಾರೆ. ಬಾಲೀಶ ಹೇಳಿಕೆ ನೀಡುತ್ತಿದ್ದಾರೆ ಅಂತಹ ಹೇಳಿಕೆಗಳಿಗೆ ನಾವು ಉತ್ತರ ನೀಡುವದಿಲ್ಲಾ ಎಂದುರು.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ ಸಂಪುಟಕ್ಕೆ ಸೇರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ತಿಂಗಳಲ್ಲಿ ಚುನಾವಣೆ ಅನೌನ್ಸ ಆಗಲಿದೆ ಈಗ ಕೇಳಿದರೇ ನಾವೇನು ಹೇಳಬೇಕು ಎಂದು ಜಾರಿಕೊಂಡರು.