ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೇ.50ರ ಮೀಸಲಾತಿ ಮಿತಿಯನ್ನು ರದ್ದುಗೊಳಿಸುತ್ತೇವೆ. ಜಾತಿ ಜನಗಣತಿ ಬಗ್ಗೆ ಹೊಸ ಕಾನೂನು ತರುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಹಮದಾಬಾದ್ನ ಎಐಸಿಸಿ ಅಧಿವೇಶನದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ (BJP) ಹೇಗೆ ಗೆದ್ದಿದೆ ಎಂಬುದು ಯಾರಿಗೂ ಗೊತ್ತಿಲ್ಲ. ನಾವು ಮತದಾರರ ಪಟ್ಟಿ ಕೇಳಿದರೆ ಚುನಾವಣಾ ಆಯೋಗದವರು ಕೊಟ್ಟಿಲ್ಲ. ಮುಂಬರುವ ಬಿಹಾರ ಚುನಾವಣೆಯುಲ್ಲಿ ನಾವು ಏನೆಂದು ತೋರಿಸುತ್ತೇವೆ ಎಂದು ಹೇಳಿದರು.
ವಕ್ಫ್ ಮಸೂದೆ ಇದು ಸಂವಿಧಾನದ ಮೇಲಿನ ದಾಳಿಯಾಗಿದೆ. ಕಾಂಗ್ರೆಸ್ ಖಂಡಿತವಾಗಿಯೂ ಆರ್‌ಎಸ್‌ಎಸ್, ಬಿಜೆಪಿಯನ್ನು ಸೋಲಿಸಲಿದೆ. ಗಾಂಧೀಜಿ ಹಾಗೂ ಆರ್‌ಎಸ್‌ಎಸ್ ವಿಚಾರಧಾರೆಯಲ್ಲಿ ವ್ಯತ್ಯಾಸ ಇದೆ. ಭಾರತ ದೇಶದ ಎಲ್ಲ ಸಂಸ್ಥೆಗಳ ಮೇಲೆ ಬಿಜೆಪಿ ಆಕ್ರಮಣ ಮಾಡುತ್ತಿದೆ. ಅಗ್ನಿವೀರ್ ಯೋಧರಿಗೆ ಪಿಂಚಣಿ ವ್ಯವಸ್ಥೆ ಇಲ್ಲ. ನಾವು ಅಧಿಕಾರಕ್ಕೆ ಬಂದರೆ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ.ಉದ್ಯಮಿಗಳಾದ ಅಂಬಾನಿ, ಅದಾನಿಗೆ ಎಲ್ಲ ಅನುಕೂಲ ಕಲ್ಪಿಸಿ ಕೊಡ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಆರ್‌ಎಸ್‌ಎಸ್ ಜಾತಿ ಜನಗಣತಿಯನ್ನು ಬಯಸುವುದಿಲ್ಲ. ಅವರು ವಾಸ್ತವವನ್ನು ಮರೆಮಾಡಲು ಬಯಸುತ್ತಾರೆ. ಆದರೆ ನೀವು ಅದನ್ನು ಎಷ್ಟೇ ಮರೆಮಾಡಿದರೂ, ನಾವು ಜಾತಿ ಜನಗಣತಿ ನಿರ್ಣಯವನ್ನು ಅಂಗೀಕರಿಸುತ್ತೇವೆ. ನಾವು ಅದನ್ನು ತೆಲಂಗಾಣದಲ್ಲಿ ಮಾಡಿದ್ದೇವೆ, ಈಗ ನಾವು ಅದನ್ನು ದೆಹಲಿ ಮತ್ತು ದೇಶಾದ್ಯಂತ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.