ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ಕಿಂಗ್ಸ್ ವಿರುದ್ಧ ಕ್ವಾಲಿಫೈಯರ್-1ನಲ್ಲಿ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4ನೇ ಬಾರಿ ಫೈನಲ್ಗೆ ಲಗ್ಗೆಯಿಟ್ಟಿದೆ.
2009, 2011, 2016ರ ಬಳಿಕ ನಾಲ್ಕನೇ ಬಾರಿ ಐಪಿಎಲ್ ಫೈನಲ್ ತಲುಪಿದ್ದು, ಟ್ರೋಫಿ ಗೆಲ್ಲುವ ನಿರೀಕ್ಷೆ ಮೂಡಿಸಿದೆ. ಇದು ಆರ್ಸಿಬಿ ಅಭಿಮಾನಿಗಳ ಥ್ರಿಲ್ಗೆ ಕಾರಣವಾಗಿದ್ದು, ಈ ಬಾರಿ ಟ್ರೋಫಿ ನಮ್ದೇ ಎಂದು ಹೇಳುತ್ತಿದ್ದಾರೆ. ಅಂತೆಯೇ ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದು ಬೇಡಿಕೆಯೊಂದನ್ನು ಇಟ್ಟಿದ್ದಾರೆ.
ಈ ಬಾರಿ ಕಪ್ ನಮ್ದು ಎಂದಾದರೆ ಆರ್ಸಿಬಿ ಫೈನಲ್ಸ್ ಗೆದ್ದ ದಿನವನ್ನು ಆರ್ಸಿಬಿ ಫ್ಯಾನ್ಸ್ ಹಬ್ಬ ಎಂದು ಘೋಷಣೆ ಮಾಡಿ ಎಂದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ದಿನ ಆರ್ಸಿಬಿಯನ್ನು ಸಂಭ್ರಮಿಸೋದಕ್ಕೆ ರಜೆ ಘೋಷಣೆ ಮಾಡಬೇಕು ಎಂದು ಸಹ ಹೇಳಿದ್ದಾರೆ.
ಗೋಕಾಕ ಮೂಲದ ಯುವಕ ಶಿವಾನಂದ ಮಲ್ಲನ್ನವರ್ ಎಂಬ ಯುವಕ ಸಿಎಂಗೆ ಪತ್ರ ಬರೆದಿದ್ದು ರಾಜ್ಯೋತ್ಸವದ ರೀತಿಯಲ್ಲಿ ಆರ್ಸಿಬಿ ಫ್ಯಾನ್ಸ್ ಹಬ್ಬದ ರೀತಿಯಲ್ಲಿ ಆಚರಣೆಗೆ ಅವಕಾಶ ನೀಡಿ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ಪತ್ರ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ.