ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಣ್ಣುಗಳ ಸೇವನೆ ಆರೋಗ್ಯಕ್ಕೆ ಉತ್ತಮವಾದುದು. ಕೆಲವು ಹಣ್ಣುಗಳು ದೇಹದ ಉಷ್ಣಾಂಶವನ್ನು ಹೆಚ್ಚಿಸಿದರೆ ಇನ್ನು ಕೆಲವು ದೇಹಕ್ಕೆ ತಂಪು ಒದಗಿಸಿಕೊಡುತ್ತವೆ. ಬೆಳಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಅನೇಕ ಮಂದಿ ಹಣ್ಣು ಸೇವಿಸುತ್ತಾರೆ. ಹಣ್ಣುಗಳ ಸೇವನೆ ಮಾಡುವಾಗ ಕೆಲವೊಂದು ಅಂಶಗಳನ್ನು ಗಮನಿಸಿದ್ದೇ ಆದಲ್ಲಿ ಇನ್ನಷ್ಟು ಉತ್ತಮ ಪರಿಣಾಮ ಲಭ್ಯವಾಗುತ್ತವೆ.
ಅಂಗಡಿಯಿಂದ ತಂದ ಹಣ್ಣುಗಳನ್ನು ತಕ್ಷಣ ನೇರವಾಗಿ ಸೇವಿಸುವುದು ಸರಿಯಲ್ಲ. ಹಣ್ಣುಗಳನ್ನು ಉಪ್ಪು ನೀರಿಗೆ ಚಿಟಿಕೆ ಅರಶಿನ ಸೇರಿಸಿ ಸರಿಯಾಗಿ ತೊಳೆದು ನಂತರ ಕತ್ತರಿಸಿ ಸೇವಿಸಬೇಕು. ಸೇವಿಸುವ ಮೊದಲು ಹಣ್ಣುಗಳ ತುಂಡುಗಳ ಮೇಲೆ ಉಪ್ಪು ಸೇರಿಸಿ ಸೇವಿಸಿ. ಉಪ್ಪಿನ ಜೊತೆಗೆ ಖಾರ ಪುಡಿಯನ್ನು ಮಿಕ್ಸ್ ಮಾಡಿ ತಿಂದರೆ ಇನ್ನಷ್ಟು ರುಚಿಯಾಗುತ್ತದೆ.
ಕಿತ್ತಳೆ, ಮಾವು, ಸ್ಟ್ರಾಬೆರಿ, ಅನನಾಸ್ ಮೊದಲಾದ ಕೊಂಚ ಹುಳಿರುಚಿಯಿರುವ ಹಣ್ಣುಗಳಿಗೆ ಉಪ್ಪು ಖಾರ ಸೇರಿಸಿ ತಿಂದರೆ ರುಚಿ ಇಮ್ಮಡಿಯಾಗುತ್ತದೆ. ಕಲ್ಲಂಗಡಿ ಹಣ್ಣಿಗೆ ಉಪ್ಪು ಸೇರಿಸಿ ತಿನ್ನುವುದರಿಂದ ರುಚಿಯ ಜೊತೆಗೆ ಅತಿಯಾದ ಶೀತದಿಂದ ದೇಹ ರಕ್ಷಣೆಗೂ ಸಹಕಾರಿಯಾಗುತ್ತದೆ. ಅನೇಕ ಸಂದರ್ಭಗಳಲ್ಲಿ ನಮ್ಮ ಅರಿವಿಗೆ ಬರದಂತೆಯೇ ಹಣ್ಣುಗಳಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹವಾಗಿರುತ್ತವೆ. ಉಪ್ಪು ಸೇರಿಸುವುದರಿಂದಾಗಿ ಅದರಲ್ಲಿರುವ ಬ್ಯಾಕ್ಟೀರಿಯ ನಾಶವಾಗುತ್ತದೆ. ಸಂಭವನೀಯ ಅನಾರೋಗ್ಯ ತಪ್ಪುತ್ತದೆ. ಸಿಟ್ರಿಕ್ ಅಂಶ ಹೊಂದಿರುವ ಹಣ್ಣುಗಳಿಗೆ ಉಪ್ಪು ಹಚ್ಚಿ ತಿಂದರೆ ಹೊಟ್ಟೆಯೊಳಗೆ ಉತ್ಪತ್ತಿಯಾಗುವ ಆಮ್ಲೀಯ ಅಂಶವನ್ನು ತಡೆಯಬಹುದಾಗಿದೆ. ರುಚಿಗೆ ಬೇಕಾದಷ್ಟು ಮಾತ್ರ ಉಪ್ಪು ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಅಧಿಕವಾಗಿ ಉಪ್ಪು ಸೇವಿಸಿದರೆ ಬಿ.ಪಿಯಂತಹ ಕಾಯಿಲೆ ಬರಲು ಕಾರಣವಾಗುತ್ತವೆ….