ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಲು ಪ್ರಯಾಣಿಕರಿಗೆ ರೈಲುಗಳಲ್ಲಿ ಕಳಪೆ ಆಹಾರ ವಿತರಣೆ ಮಾಡುತ್ತಿರುವ ಕುರಿತು ಸಾಕಷ್ಟು ವಿಡಿಯೋ, ಪೋಸ್ಟ್ಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗಷ್ಟೇ ಇದೇ ರೀತಿಯ ಮತ್ತೊಂದು ಘಟನೆ ನಡೆದಿದ್ದು, ಆಹಾರದಲ್ಲಿ ಚೇಳು ಪತ್ತೆಯಾಗಿದ್ದು, ಅದರ ಫೋಟೋ ಇದೀಗ ವೈರಲ್ ಆಗಿದೆ.
IRCTC ಯ ವಿಐಪಿ ಎಕ್ಸಿಕ್ಯುಟಿವ್ ಲಾಂಜ್‌ನಲ್ಲಿ ಆಹಾರದಲ್ಲಿ ಚೇಳನ್ನು ಕಂಡಿರುವುದಾಗಿ ದೆಹಲಿಯ ಪ್ರಯಾಣಿಕರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
@aaraynsh ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ IRCTC ಒದಗಿಸಿದ ಆಹಾರದ ಗುಣಮಟ್ಟವನ್ನು ನೀವೇ ನೋಡಿ ಎಂದು ಕ್ಯಾಪ್ಷನ್ ನೀಡಲಾಗಿದೆ. VIP ಕಾರ್ಯನಿರ್ವಾಹಕ ಲಾಂಜ್‌ಗಳಲ್ಲಿ ಈ ರೀತಿ ಸಂಭವಿಸಿದರೆ ಸಾಮಾನ್ಯ ರೈಲುಗಳಲ್ಲಿನ ಆಹಾರ ಗುಣಮಟ್ಟವನ್ನು ಊಹಿಸಲು ಸಾಧ್ಯವಿಲ್ಲ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
Yes, for sure, Indian Railway food quality has improved, now they are serving raita with more protein. https://t.co/YKtUQt7roZ pic.twitter.com/FpJVIKOhBC
— Aaraynsh (@aaraynsh) October 21, 2024