ಸ್ವಲ್ಪ ನೀರು ತಾನೇ ಯೂಸ್ ಮಾಡಿದ್ರೆ ಏನೂ ಆಗೋದಿಲ್ಲ ಅಂತ ಚೆನ್ನಾಗಿ ಬಳಕೆ ಮಾಡ್ಬೇಡಿ. ಮುಂದೊಂದು ದಿನ ನಿಮ್ಮ ಮಕ್ಕಳೋ, ಮೊಮ್ಮಕ್ಕಳೋ ಟಾಯ್ಲೆಟ್ ನಂತರ ಟಿಶ್ಯೂ ಪೇಪರ್ ಬಳಕೆ ಮಾಡಬೇಕಾಗುತ್ತದೆ. ಈ ಪರಿಸ್ಥಿತಿ ಬರಬಾರದು ಎಂದರೆ ನೀರನ್ನು ಮಿತವಾಗಿ ಬಳಕೆ ಮಾಡಿ. ಹೇಗೆ ನೋಡಿ..
ನೀರನ್ನು ಹೀಗೆ ಉಳಿಸಿ..
ಕೆಲಸ ಮುಗಿದ ತಕ್ಷಣ ನಲ್ಲಿ ಬಂದ್ ಮಾಡಿ
ಐದು ನಿಮಿಷದ ಸ್ನಾನ ಸಾಕು, ಅನಾವಶ್ಯಕವಾಗಿ ನೀರು ಸುರೀಬೇಡಿ
ಯಾವುದಾದರೂ ನಲ್ಲಿಯಲ್ಲಿ ಲೀಕ್ ಇದ್ದರೆ ಇಂದೇ ರಿಪೇರ್ ಮಾಡಿಸಿ
ಬಟ್ಟೆ ತುಂಬಿದ ನಂತರ ಮಾತ್ರ ವಾಶಿಂಗ್ ಮಶೀನ್ ಬಳಸಿ, ನಾಲ್ಕು ಬಟ್ಟೆಗೆಲ್ಲಾ ವಾಶಿಂಗ್ ಮಶೀನ್ ರನ್ ಮಾಡ್ಬೇಡಿ.
ಕಮೋಡ್‌ನಲ್ಲಿ ಒಮ್ಮೆ ಫ್ಲಶ್ ಮಾಡಿದರೆ ಐವತ್ತು ಲೀಟರ್‌ನಷ್ಟು ನೀರು ಹೋಗುತ್ತದೆ. ಮೂತ್ರ ವಿಸರ್ಜನೆ ಮಾಡಿದಾಗ ಬಕೆಟ್‌ನಿಂದ ಎರಡು ಚೊಂಬು ನೀರು ಹಾಕಿ ಕ್ಲೀನ್ ಆಗುತ್ತದೆ.
ವಾಟರ್ ರೀ ಯೂಸ್ ಮಾಡಿ, ಅದನ್ನು ಪಾತ್ರೆ ತೊಳೆಯಲು ಬಳಕೆ ಮಾಡಿ.
ಮಳೆ ನೀರನ್ನು ಸೇವ್ ಮಾಡಿ ಬಳಕೆ ಮಾಡಿ. ಮಕ್ಕಳಿಗೆ ನೀರಿನಲ್ಲಿ ಆಡಲು ನೀಡಬೇಡಿ.
ಮನೆಯಲ್ಲಿ ಎಲ್ಲರಿಗೂ ನೀರನ್ನು ಸೇವ್ ಮಾಡುವ ಬಗ್ಗೆ ಪಾಠ ಹೇಳಿ.
ಮನೆಯ ಹೊರಾಂಗಣಕ್ಕೆ ನೀರು ಹಾಕುವ ಬದಲು ಪೊರಕೆಯಲ್ಲಿ ಗುಡಿಸಿ. ಒರೆಸಲೇ ಬೇಕು ಎಂದರೆ ನೀರು ಚೆಲ್ಲಬೇಡಿ. ಬದಲಾಗಿ ಒಂದು ಸಣ್ಣ ಬಕೆಟ್ ನೀರಿನಲ್ಲಿ ನೆಲ ಒರೆಸಿ.