ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ತಿರುವನಂತಪುರ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಬಲೂನ್, ಗಾಳಿಪಟ ಹಾರಾಟವನ್ನು ನಿಷೇಧಿಸಲಾಗಿದ್ದು, ಇದನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಬಲೂನ್, ಗಾಳಿಪಟಗಳಲ್ಲದೆ ಲೇಸರ್ ಲೈಟುಗಳು, ಪಟಾಕಿ, ಲೇಸರ್ ಬೀಮ್ ಲೈಟ್ ಬಳಕೆಯನ್ನೂ ನಿರ್ಬಂಧಿಸಲಾಗಿದೆ. ಈ ಲೈಟ್‌ಗಳಿಂದಾಗಿ ವಿಮಾನ ಇಳಿಯುವ ಸಂದರ್ಭ ಅಪಾಯ ಎದುರಾಗುತ್ತದೆ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಇಲಾಖೆ ಮುಂದಾಗಿದೆ. ವಿಮಾನ ನಿಲ್ದಾಣದಿಂದ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ನಿಷೇಧ ಜಾರಿಯಲ್ಲಿದೆ.