ಇಂದಿನ ವೇಗದ ಯುಗದಲ್ಲಿ ಹೆಚ್ಚಿನವರು ತಮ್ಮ ಕೆಲಸ ಮತ್ತು ವೈಯುಕ್ತಿಕ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳದೇ, ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಒತ್ತಡಕ್ಕೆ ಸಿಕ್ಕು ಒದ್ದಾಡ್ತಿದ್ದಾರೆ. ಇದರ ಪರಿಣಾಮ ಹೆಚ್ಚಿನವರು ರಕ್ತದೊತ್ತಡ, ಮಧುಮೇಹ, ಖಿನ್ನತೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಂಥ ಸಂದರ್ಭದಲ್ಲಿಯೂ ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ಸಾಗಿಸಲು ಕೆಲವು ಸರಳ ಕ್ರಮಗಳನ್ನು ಪಾಲಿಸಬೇಕಾಗುತ್ತದೆ.
ಸಂಬಂಧಗಳನ್ನು ಪ್ರಾಮುಖ್ಯತೆಯಿಂದ ನೋಡಿ
ನಿಮ್ಮ ಜೀವನದಲ್ಲಿ ಇರುವ ಸಂಬಂಧಗಳು ನಿಮ್ಮ ಸಂತೋಷಕ್ಕೆ ಹಾಗೂ ಮಾನಸಿಕ ಸುಸ್ಥಿತಿಗೆ ಬಹುಮುಖ್ಯ ಪಾತ್ರ ವಹಿಸುತ್ತವೆ. ಕುಟುಂಬಸ್ಥರು, ಸ್ನೇಹಿತರು ಅಥವಾ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವಿದ್ದುದು ನಿಮ್ಮ ಭಾವನಾತ್ಮಕ ಸ್ಥಿತಿಯನ್ನು ಸ್ಥಿರಗೊಳಿಸಬಹುದು.
ಅರ್ಥಪೂರ್ಣತೆಗೆ ಆದ್ಯತೆ ನೀಡಿ
ಹೆಚ್ಚು ಹಣ ಅಥವಾ ಆಸ್ತಿಯಲ್ಲೇ ಸಂತೋಷವಿಲ್ಲ. ಬದಲಿಗೆ, ನಿಮ್ಮ ಜೀವನದಲ್ಲಿ ಅರ್ಥಪೂರ್ಣ ಅಂಶಗಳತ್ತ ಗಮನ ಹರಿಸಿ. ನೀವು ಸಂತೋಷ ಹೊಂದಿದರೆ ಅದು ನಿಮ್ಮ ಸ್ವಂತ ಮೌಲ್ಯಗಳು, ಆಸಕ್ತಿಗಳು ಮತ್ತು ಪ್ರೀತಿಯ ಜನರೊಂದಿಗೆ ಇದ್ದ ಸಂಬಂಧಗಳಿಂದ ಆಗುತ್ತದೆ. ಇತರರನ್ನು ಸಹಾಯ ಮಾಡುವ ಮನೋಭಾವ, ಸಮಯವನ್ನು ಸಮರ್ಥವಾಗಿ ಬಳಸುವುದು ಇದರಲ್ಲಿ ಪ್ರಮುಖವಾಗಿದೆ.
ನಿದ್ರೆಯ ಗುಣಮಟ್ಟ ಸುಧಾರಿಸಿ
ಆರೋಗ್ಯಕರ ನಿದ್ರೆ ಜೀವನದ ಒತ್ತಡವನ್ನು ನಿರ್ವಹಿಸಲು ಅಗತ್ಯ. ಪ್ರತಿದಿನ 7 ರಿಂದ 8 ಗಂಟೆಗಳ ನಿದ್ರೆ ಮಾನಸಿಕವಾಗಿ ಶಕ್ತಿಯಾಗಿರಲು ಸಹಾಯಕ. ನಿದ್ರೆಯ ಸಮಯವನ್ನು ನಿಯಮಿತವಾಗಿಟ್ಟುಕೊಂಡರೆ ಖಿನ್ನತೆ, ಆತಂಕ ಇವು ಕಡಿಮೆಯಾಗುತ್ತವೆ.
ದಯೆ ಮತ್ತು ಕೃತಜ್ಞತೆಯನ್ನು ಬೆಳೆಸಿ
ಜೀವನದಲ್ಲಿ ಸಣ್ಣ ಸಹಾಯಗಳು, ಸರಳ ಧನ್ಯವಾದಗಳು ನಿಮ್ಮ ಒಳಜಗತ್ತನ್ನು ಹೆಚ್ಚು ಶ್ರೇಷ್ಟವಾಗಿಸುತ್ತದೆ. ದಯೆ ಮತ್ತು ಕೃತಜ್ಞತೆಯು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಪ್ರತಿದಿನದ ಸಣ್ಣ ಸಂತೋಷಗಳನ್ನು ಗಮನಿಸಿ, ಎಲ್ಲದರಿಗೂ ಕೃತಜ್ಞರಾಗಿರಿ.
ಶಾರೀರಿಕ ಚಟುವಟಿಕೆಗೆ ಒತ್ತುಕೊಡಿ
ಹಾಗೆಯೇ, ದಿನನಿತ್ಯ ವ್ಯಾಯಾಮ ಅಥವಾ ನಡಿಗೆ ಮೂಲಕ ದೇಹವನ್ನು ಚಲಿಸುವಂತೆ ಮಾಡುವುದು ಎಂಡಾರ್ಫಿನ್, ಡೋಪಮೈನ್ ಹಾಗೂ ಸೆರೋಟೋನಿನ್ ಎಂಬ ‘ಹ್ಯಾಪಿ ಹಾರ್ಮೋನು’ಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಇವು ಖಿನ್ನತೆ, ಒತ್ತಡವನ್ನು ಕಡಿಮೆ ಮಾಡುತ್ತವೆ ಮತ್ತು ಉತ್ಸಾಹ ತುಂಬಿದ ಮನಸ್ಥಿತಿಯನ್ನು ಕೊಡುತ್ತವೆ.
ಮನೋಭಾವ ಮತ್ತು ಚಿಂತನ ಶೈಲಿಗೆ ಬದಲಾವಣೆ
ನಿಮ್ಮೊಳಗಿನ ಆಲೋಚನಾ ಶೈಲಿಯನ್ನು ಧನಾತ್ಮಕವಾಗಿ ರೂಪಿಸಿಕೊಳ್ಳುವುದು ಹೆಚ್ಚು ಶಕ್ತಿಶಾಲಿ. “ನಾನು ಇದನ್ನು ಮಾಡಲಾಗದು” ಎಂಬ ನಿಲುವಿಗೆ ಬದಲಾಗಿ “ಇದನ್ನು ಕಲಿಯುತ್ತಿದ್ದೇನೆ” ಎನ್ನುವ ದೃಷ್ಟಿಕೋನವು ನಿಮ್ಮ ಪ್ರಗತಿಗೆ ದಾರಿ ಮಾಡುತ್ತದೆ.
ಸಾರವಾಗಿ ಹೇಳಬೇಕಾದರೆ, ಒತ್ತಡವಿಲ್ಲದ ಸಂತುಷ್ಟ ಜೀವನದ ಶ್ರೇಷ್ಠ ಮಾರ್ಗವೇ ಆರೋಗ್ಯಕರ ಜೀವನಶೈಲಿ. ಸಂಬಂಧ, ನಿದ್ರೆ, ಚಿಂತನ ಶೈಲಿ, ದಯೆ ಮತ್ತು ವ್ಯಾಯಾಮ – ಈ ಎಲ್ಲದಕ್ಕೂ ಸಮಾನವಾಗಿ ಮಹತ್ವ ಕೊಟ್ಟಾಗ ಜೀವನದಲ್ಲಿ ನೆಮ್ಮದಿ ಸಾಧ್ಯವಾಗುತ್ತದೆ.