ಚಾರಿಟಿಗೆ ಹಣ ನೀಡಿದ್ರೆ ನಗ್ನ ಚಿತ್ರ ಗಿಫ್ಟ್‌ ಆಗಿ ಕೊಡ್ತೀನಿ: ಫ್ಯಾನ್ಸ್‌ಗೆ ನೀಲಿ ತಾರೆಯ ಆಫರ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್ : 

ಸಾಮಾನ್ಯವಾಗಿ ಜನರಿಗೆ ಬಟ್ಟೆ ಏನಾದ್ರು ವಸ್ತು ಖರೀದಿ ವೇಳೆ ವಸ್ತುಗಳು ಮಾರಾಟವಾಗಬೇಕು ಎನ್ನುವ ನಿಟ್ಟಿನಲ್ಲಿ ಹೊಸ ಹೊಸ ಆಫರ್‌ ಅನ್ನು ಅಂಗಡಿ ಅವರು ನೀಡುತ್ತಾರೆ.

ಅದೇ ರೀತಿಯಲ್ಲಿ ಇಲ್ಲಿ ಅಮೆರಿಕಾದಲ್ಲಿ ನೀಲಿಚಿತ್ರ ತಾರೆಯೊಬ್ಬರು ಆಫರ್‌ ಅನ್ನು ನೀಡಿದ್ದಾರೆ.

ಮಾಜಿ ಕ್ಯಾಥೋಲಿಕ್ ಶಾಲಾ ಶಿಕ್ಷಕಿಯಾಗಿರುವ ಕರ್ಟ್ನಿ ಟಿಲಿಯಾ ತಮ್ಮ ಹೊಸ ವೃತ್ತಿಜೀವನದ ಯಶಸ್ಸನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ.ಅದೇನೆಂದರೆ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ 36 ವರ್ಷ ಟಿಲಿಯಾ, ಮರೀನ್‌ ಮಮ್ಮಲ್‌ ಕೇರ್ ಸೆಂಟರ್‌ಗೆ (ಅಂದರೆ ಸಾಗರ ಸಸ್ತನಿ ಆರೈಕೆ ಕೇಂದ್ರ) ದೇಣಿಗೆ ನೀಡಿದವರಿಗೆ ತನ್ನ ನಗ್ನ ಚಿತ್ರಗಳನ್ನ ಉಡುಗೊರೆಯಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾಳೆ.

ಟಿಲಿಯಾ ಓನ್ಲಿ ಫ್ಯಾನ್ಸ್‌ ಅಕೌಂಟ್‌ನಿಂದ ತಿಂಗಳಿಗೆ 1 ಲಕ್ಷ ಡಾಲರ್‌ಗೂ ಅಧಿಕ ಹಣ ಸಂಪಾದನೆ ಮಾಡುತ್ತಿದ್ದಾಳೆ. ಅದರೊಂದಿಗೆ ವೃತ್ತಿಜೀವನಲ್ಲಿ ಬದಲಾಯಿಸಬೇಕು ಅನ್ನುವವರಿಗೆ ತನ್ನ ಸಹಾಯ ನೀಡುತ್ತಿದ್ದಾರೆ. ಇದು ಮಾತ್ರವೇ ಅಲ್ಲದೆ ತನ್ನ ಅಕೌಂಟ್‌ಗಳಿಂದ ದತ್ತಿ ಕೇಂದ್ರಗಳಿಗೆ ಹಣ ಸಂಪಾದನೆ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

‘ಕ್ಯಾಲಿಫೋರ್ನಿಯಾದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಸಮುದ್ರ ಸಸ್ತನಿಗಳಿಗೆ ಸಹಾಯ ಮಾಡಲು ಇಚ್ಛಿಸಿ ಹಣ ಸಹಾಯ ಮಾಡುವ ಎಲ್ಲರಿಗೂ ನಾನು ನನ್ನ ಬೆತ್ತಲೆ ಚಿತ್ರವನ್ನು ಉಡುಗೊರೆಯಾಗಿ ನೀಡುತ್ತೇನೆ’ ಎಂದು 36 ವರ್ಷದ ನೀಲಿ ಚಿತ್ರ ತಾರೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅದರೊಂದಿಗೆ ನನ್ನ ಓನ್ಲಿ ಫ್ಯಾನ್ಸ್‌ ಅಕೌಂಟ್‌ನ ಲಿಂಕ್‌ಗಳನ್ನೂ ನಾನು ಹಂಚಿಕೊಳ್ಳುತ್ತೇನೆ. ಅದಕ್ಕಾಗಿ ಅವರು 50 ಡಾಲರ್‌ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ದೇಣಿಗೆಯಾಗಿ ನೀಡಬೇಕಿರುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಪ್ರತಿ ದೇಣಿಗೆಗೂ ನಾನು ಒಂದು ಬೆತ್ತಲೆ ಚಿತ್ರವನ್ನು ಗಿಫ್ಟ್‌ ಆಗಿ ಕಳಿಸುತ್ತೇನೆ. ನೀವು ದೇಣಿಗೆ ಮಾಡಿರುವ ಖಾತರಿಯ ಸಂದೇಶದ ಸ್ಕ್ರೀನ್‌ಶಾಟ್‌ ನನಗೆ ನೇರವಾಗಿ ಮೆಸೇಜ್‌ ಮಾಡಿದರೆ, ನಿಮ್ಮ ಡಿಎಂಗೆ ನನ್ನ ಬೆತ್ತಲೆ ಚಿತ್ರ ಬರುತ್ತದೆ’ ಎಂದು ಬರೆದಿದ್ದಾರೆ.

ಸಂಪ್ರದಾಯವಾದಿ ಕ್ರಿಶ್ಚಿಯನ್‌ ಕುಟುಂಬದಲ್ಲಿ ಜನಿಸಿದ್ದ ಟಿಲಿಯಾ, ತೀರಾ ಇತ್ತೀಚಿನವರೆಗೂ ಕ್ಯಾಥೋಲಿಕ್‌ ಶಾಲೆಯಲ್ಲಿ ಶಿಕ್ಷಕಿಯಾ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಒಂದು ದಿನ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಆಕೆ, ವಯಸ್ಕರ ಚಿತ್ರದ ಉದ್ಯಮಗಳಿಗೆ ಕಾಲಿಟ್ಟಿದ್ದರು. ದೇವರು ನನಗೆ ಈ ಕೆಲಸ ಮಾಡಲು ಹೇಳಿದ್ದಾನೆ. ಅದಕ್ಕಾಗಿ ಪೋರ್ನ್‌ ಇಂಡಸ್ಟ್ರಿ ಪ್ರವೇಶಿಸಿದ್ದೇನೆ ಎಂದು ಟಿಲಿಯಾ ತಿಳಿಸಿದ್ದರು. ವಯಸ್ಕ ಚಿತ್ರಗಳ ಉದ್ಯಮಕ್ಕೆ ಬರುವ ವ್ಯಕ್ತಿಗಳಿಗೆ ಆಕೆ ತನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದೂ ಬರೆದುಕೊಂಡಿದ್ದಾರೆ.

ಪ್ರಾಣಿಗಳನ್ನು ಅತಿಯಾಗಿ ಪ್ರೀತಿ ಮಾಡುವ ಟಿಲಿಯಾ ತನ್ನಿಂದ ಕೈಲಾದಷ್ಟು ಚಾರಿಟಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದಾರೆ. ಓನ್ಲಿ ಫ್ಯಾನ್ಸ್‌ನಲ್ಲಿರುವ ತನ್ನ ಅಭಿಮಾನಿಗಳಿಂದ ಚಾರಿಟಿಗೆ ಹಣ ಸಹಾಯವನ್ನೂ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!