ನಾವು ಎಷ್ಟೇ ಎಚ್ಚರಿಕೆಯಿಂದ ಇದ್ದರೂ, ಕೆಲವೊಮ್ಮೆ ಅನಾಹುತವಾಗಿ ಬಟ್ಟೆಯ ಮೇಲೆ ಕಲೆ ಬೀಳುತ್ತದೆ. ಅದರಲ್ಲೂ ಬಿಳಿ ಬಟ್ಟೆಯ ಮೇಲೆ ಟೀ, ಕಾಫಿ ಅಥವಾ ಖಾದ್ಯ ಪದಾರ್ಥಗಳಿಂದ ಕಲೆ ಬಿದ್ದರೆ ಅದನ್ನು ತೆಗೆದುಹಾಕುವುದು ತುಂಬಾ ಕಷ್ಟ. ಪೌಡರ್ ಅಥವಾ ಡಿಟರ್ಜೆಂಟ್ ಬಳಸಿದರೂ ಕೆಲವೊಮ್ಮೆ ಕಲೆ ಚೆನ್ನಾಗಿ ಹೋಗದೆ, ಬಟ್ಟೆ ಹಾಳಾಗುತ್ತದೆ. ಆದರೆ, ಕೆಲವೊಂದು ಮನೆಯಲ್ಲಿಯೇ ಸಿಗುವ ಸಾಮಗ್ರಿಗಳ ಬಳಕೆ ಮೂಲಕ ಬಿಳಿ ಬಟ್ಟೆಗಳಿಂದ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು.
ಹಾಲು ಮತ್ತು ನಿಂಬೆ ಬಳಕೆ
ಬಿಳಿ ಬಟ್ಟೆಯ ಮೇಲಿರುವ ಕಲೆಗಳನ್ನು ನಿವಾರಣೆಗೆ ಹಾಲು ಮತ್ತು ನಿಂಬೆ ಅತ್ಯುತ್ತಮ ಸಂಯೋಜನೆ. ಒಂದು ಕಪ್ ಹಾಲಿಗೆ ಅರ್ಧ ನಿಂಬೆಹಣ್ಣಿನ ರಸ ಸೇರಿಸಿ ಮಿಶ್ರಣ ಮಾಡಿ. ಈ ದ್ರಾವಣವನ್ನು ಕಲೆಯ ಮೇಲೆ ಹಚ್ಚಿ 15-20 ನಿಮಿಷ ಇಟ್ಟು ನಂತರ ತಣ್ಣೀರಿನಲ್ಲಿ ತೊಳೆಯಿರಿ. ಚಹಾ ಅಥವಾ ಜ್ಯೂಸ್‌ನ ಕಲೆಗಳಿಗಾಗಿ ಇದು ಪರಿಣಾಮಕಾರಿಯಾಗಿರುತ್ತದೆ.
ವಿನೆಗರ್ ಮತ್ತು ಅಡಿಗೆ ಸೋಡಾ ಮಿಶ್ರಣ
ಈ ಮಿಶ್ರಣವು ಬಟ್ಟೆಯಲ್ಲಿರುವ ದ್ರವ ಅಥವಾ ಎಣ್ಣೆಯ ಕಲೆಗಳನ್ನು ತೆಗೆಯಲು ಉಪಯೋಗಿಸಬಹುದು. ಎರಡು ಚಮಚ ವಿನೆಗರ್, ಒಂದು ಚಮಚ ಅಡಿಗೆ ಸೋಡಾ ಮತ್ತು ಒಂದು ಕಪ್ ನೀರನ್ನು ಬೆರೆಸಿ ಕಲೆಯ ಮೇಲೆ ಹಚ್ಚಿ. 10-15 ನಿಮಿಷ ಇಟ್ಟು ನೀರಿನಿಂದ ತೊಳೆಯಿರಿ. ಇದರಿಂದ ಬಟ್ಟೆಗೆ ಹೊಸ ಹೊಳಪು ಬರುತ್ತದೆ.
ಉಪ್ಪು
ಜ್ಯೂಸ್ ಅಥವಾ ಮಸಾಲೆಗಳಿಂದ ಬಂದ ಕಲೆಗಳಿಗೆ ಉಪ್ಪು ಒಂದು ಉತ್ತಮ ಪರಿಹಾರ. ಕಲೆಯ ಮೇಲೆ ಉಪ್ಪು ಹಾಕಿ ಸ್ವಲ್ಪ ಉಜ್ಜಿಕೊಂಡು ತಣ್ಣೀರಿನಲ್ಲಿ ತೊಳೆಯಿರಿ.
ಗ್ಲಿಸರಿನ್ ಬಳಸಿ ತಾಜಾ ಲುಕ್
ಚಹಾ ಅಥವಾ ಕಾಫಿಯಿಂದ ಬಿದ್ದ ಕಲೆಗಳಿಗೆ ಗ್ಲಿಸರಿನ್ ಉತ್ತಮ. ಕೆಲ ಹನಿ ಗ್ಲಿಸರಿನ್ ಅನ್ನು ಕಲೆಯ ಮೇಲೆ ಹಾಕಿ ಲಘುವಾಗಿ ಮಸಾಜ್ ಮಾಡಿ. ನಂತರ ತಣ್ಣೀರಿನಲ್ಲಿ ಬಟ್ಟೆಯನ್ನು ತೊಳೆಯಿರಿ.
ಟೊಮೆಟೊ ರಸದಿಂದ ಶಾಯಿ ಕಲೆಗಳಿಗೆ ಪರಿಹಾರ
ಶಾಯಿ ಅಥವಾ ಇಂಕ್‌ನಿಂದ ಬಿದ್ದ ಕಲೆಗಳಿಗೆ ಟೊಮೆಟೊ ರಸ ಪ್ರಯೋಜನಕಾರಿ. ಕೆಲವು ಹನಿ ಟೊಮೆಟೊ ರಸವನ್ನು ಕಲೆಯ ಮೇಲೆ ಹಚ್ಚಿ 10 ನಿಮಿಷ ಬಿಡಿ. ನಂತರ ಸಾಮಾನ್ಯವಾಗಿ ಬಟ್ಟೆ ತೊಳೆಯುವಂತೆ ತೊಳೆಯಿರಿ.
ಮೊಸರು – ಎಣ್ಣೆ ಕಲೆಗಳಿಗೆ ಪರಿಹಾರ
ಬಿಳಿ ಬಟ್ಟೆಯ ಮೇಲೆ ಎಣ್ಣೆ ಬಿದ್ದರೆ ಮೊಸರನ್ನು ನೇರವಾಗಿ ಕಲೆಯ ಮೇಲೆ ಹಚ್ಚಿ. ಸ್ವಲ್ಪ ಸಮಯ ಬಿಡಿ, ನಂತರ ತಣ್ಣೀರಿನಿಂದ ತೊಳೆಯಿರಿ. ಮೊಸರು ಎಣ್ಣೆಯ ಅಂಶವನ್ನು ಹೀರಿಕೊಳ್ಳುತ್ತದೆ.