ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶಾಲವಾಗಿ ಬೆಳೆಯುವ ನೂರಾರು ಕಾಲ ಬಾಳುವ ಮರ ಮುಪ್ಪಾದರೂ ಕಾಯಿ ಮಾತ್ರ ಹುಳಿಯಾಗಿಯೇ ಇರುವ, ಹುಣಸೆ ಪ್ರತಿಯೊಬ್ಬರ ಬಾಯಲ್ಲೂ ಹೆಸರು ಹೇಳಿದರೇ ನೀರೂರುವಂತೆ ಮಾಡುತ್ತದೆ. ಎಳೆಯ ಹುಣಸೆ ಹುಳಿಯ ಕೋಡು ತಿನ್ನುವುದೇ ಒಂದು ಮಜಾ. ಸಸ್ಯಾಹಾರಿ ಹಾಗೂ ಶಾಖಾಹಾರಿಗಳು ಅಡುಗೆ ತಯಾರಿಸಲು ಹುಣಸೆ ಹುಳಿಯನ್ನು ಬಳಸುತ್ತಾರೆ. ಸಾರು,ಸಾಂಬಾರು,ಚಟ್ನಿ,ಪಲ್ಯ,ಮಜ್ಜಿಗೆಹುಳಿ ಹೀಗೆ ಯಾವ ಅಡುಗೆ ಸಿದ್ದಪಡಿಸುವುದಾದರೂ ಹುಣಸೆ ಹುಳಿ ಮಾತ್ರ ಬೇಕೇ ಬೇಕು. ಹುಳಿ ಹಾಕಿದರೆ ಅಡುಗೆಯ ರುಚಿ ಏರುತ್ತದೆ. ಈ ಹುಣಸೆ ಹುಳಿಯನ್ನು ಎಲ್ಲರೂ ಸೇವಿಸುವಂತಿಲ್ಲ ಎಂಬ ಅಂಶ ನೀವು ತಿಳಿದರೆ ಬೆಚ್ಚಿ ಬೀಳೋದಂತೂ ಗ್ಯಾರಂಟಿ. ಹಾಗಾದ್ರೆ ಯಾರು ಸೇವಿಸಬಾರದು ನೋಡೋಣ…!
ಅನೇಕ ಮಂದಿಗೆ ಹಲ್ಲುಗಳ ಸಮಸ್ಯೆ ಇದ್ದೇ ಇರುತ್ತೆ. ಹಲ್ಲು ಹುಳುಕಾಗಿರುವುದು, ಜುಂ ಗುಟ್ಟುವುದು, ನೋವು ಬರುವುದು ಈ ರೀತಿಯ ಸಮಸ್ಯೆಯಿಂದ ಯಾರು ಬಳಲುತ್ತಿರುತ್ತಾರೋ ಅವರು ಹುಣಸೆ ಹುಳಿಯನ್ನು ತಿನ್ನುವುದರಿಂದ ಅವರ ಸಮಸ್ಯೆ ಉಲ್ಭಣವಾಗುವ ಸಾಧ್ಯತೆಗಳು ಅತಿಯಾಗಿರುತ್ತವೆ. ಹಾಗಾಗಿ ಖಂಡಿತವಾಗಿಯೂ ಅವರು ಹುಣಸೆ ಹುಳಿ ತಿನ್ನಲೇ ಬಾರದು.
ಅಲರ್ಜಿ ಸಮಸ್ಯೆ ಇರುವವರಂತೂ ಹುಣಸೆ ಹುಳಿಯ ಹತ್ತಿರವೂ ಸುಳಿಯಬಾರದು!. ಹೌದು ಹುಣಸೆ ಹುಳಿಯನ್ನು ಅಲರ್ಜಿ ಸಮಸ್ಯೆ ಇರುವವರು ತಿಂದದ್ದೇ ಆದಲ್ಲಿ ತುರಿಕೆ, ಊತ, ಕೆಲವೊಮ್ಮೆ ತಲೆತಿರುಗುವ ಸಂಭವವೂ ಉಂಟಾಗುತ್ತದೆ. ಮಲಬದ್ಧತೆ ಹಾಗೂ ಅಜೀರ್ಣದ ಸಮಸ್ಯೆ ಇರುವವರು ಹುಣಸೆ ಹಣ್ಣು ತಿನ್ನಬಾರದು.