ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಷ್ಟವಿದ್ರೆ ಪ್ರೀತಿಯಿಂದ ಇರ್ತೇನೆ, ಕಷ್ಟವಾದ್ರೆ ದೂರ ಇರ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ. ನಿನ್ನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಚಿತ್ರತಂಡ ‘ಕಾಟೇರ’ ಹಾಗೂ ರೈತ ಮುಖಂಡ ಶ್ರೀ ಪುಟ್ಟಣ್ಣಯ್ಯ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ಮಾತನಾಡಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಭುಜ ತಟ್ಟಿ ಚಾಲೆಂಜಿಂಗ್ ಸ್ಟಾರ್ ಮಾತನಾಡಿದರು. ನಾನು ಹೊಗಳುವ ವೇಳೆ ನಾನು ಯಾರಿಗೂ ಕಾಕ ಹೊಡೆಯಲ್ಲ, ಚಮಚ ಹೊಡೆಯಲ್ಲ ಸ್ವಾಮಿ.. ಇಷ್ಟ ಇದ್ರೆ ಪ್ರೀತಿಯಿಂದ ಇರ್ತೇನೆ, ಕಷ್ಟವಾದರೆ ದೂರ ಇರ್ತೇನೆ ಎಂದರು.
ಅವರು ಮಾತು ಮುಂದುವರೆಸಿದರು. ನಾನು ಕಾರಿನಲ್ಲಿ ಕುಳಿತಾಗ ಯಾರೋ ಮಾತನಾಡುತ್ತಿದ್ದರು. ನೀವು ನಿಜವಾಗಿಯೂ ಒಳ್ಳೆಯದನ್ನು ಹೇಳಿದ್ದೀರಿ, ಉರಿಯೋರು ಉರ್ಕೊಳ್ಳಿ. ಬೈದೋರು ಬೇಯಿಸ್ಕೊಳ್ಳಿ. ದರ್ಶನ್ ಮಾತ್ರ ಹಿಂಗೆ ಇರೋದು ಅಂತಾ. ನಿಜ, ಇಂದು ನಾನು ತುಂಬಾ ತಾಳ್ಮೆಯಿಂದ ಇದ್ದೇನೆ. ತಾಳ್ಮೆ ನಮಗೆ ಅನೇಕ ವಿಷಯಗಳನ್ನು ಕಲಿಸುತ್ತದೆ. ಯಾರು ಏನೇ ಮಾಡಿದರೂ ಇಲ್ಲಿನ ಅಭಿಮಾನಿಗಳೇ ನನಗೆ ಸಾಕು. ನನಗೆ ಯಾರೂ ಬೇಡ ಎಂದರು.